ಸರ್ಕಾರಿ ಶಾಲಾ ಮಕ್ಕಳಿಗೆ ಐ.ಡಿ ಕಾರ್ಡ್, ಬೆಲ್ಟ್, ಹಾಗೂ ಗ್ಲೋಬ್ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಆಟದ ಸಾಮಾನುಗಳು ವಿತರಿಸಿದರು.
ಕೂಡ್ಲಿಗಿ ಅ .01

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರದ ಶಾಲೆಯಲ್ಲಿ ಬುಧವಾರ ರಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ಸುಬನ್ ಸಾಹೇಬ್ ಹಾಗೂ ಸಿ.ಆರ್.ಪಿ ಯ ಶೇಖರಪ್ಪ ರವರು ಈ ಕಾರ್ಯಕ್ರಮ ಕುರಿತು ಮಾತನಾಡಿದರು, ಸರ್ಕಾರಿ ಶಾಲೆಗೆ ದಾನಿಗಳು ವಿದ್ಯಾರ್ಥಿಗಳಿಗೆ ಪ್ರತಿ ವರ್ಷನು ಬೇರೆ ಬೇರೆ ವಸ್ತುಗಳು ಪುಸ್ತಕಗಳು ಪೇನ್ ಹೀಗೆ “ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡದ ವತಿಯಿಂದ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಕೊರಳಲ್ಲಿ ಧರಿಸುವ ಐಡಿ ಕಾರ್ಡ್, ಬೆಲ್ಟ್ ಹಾಗೂ ಶಾಲೆಗೆ ಗ್ಲೋಬ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಟದ ಸಾಮಾನುಗಳು, ಚಟುವಟಿಕೆಯ ಹಾಳೆಗಳನ್ನು ನೀಡಿರುತ್ತಾರೆ.

ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ವಿದ್ಯಾಧರ ಮುತಾಲಿಕ ದೇಸಾಯಿಯವರು ಕಳೆದ ಮೂರು ವರ್ಷಗಳಿಂದಲೂ ರಾಜೀವ್ ಗಾಂಧಿ ನಗರ ಶಾಲೆ ಹಾಗೂ ಮಕ್ಕಳ ಅಭ್ಯುದಯಕ್ಕಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. ಇಂತ ಒಳ್ಳೆ ಮನಸ್ಸುವುಳ್ಳಾ ವ್ಯಕ್ತಿಗಳಿಗೆ ಶಾಲಾ ವತಿಯಿಂದ ಕೃತಜ್ಞತೆ ಸಲ್ಲಿಸಿದರು ಹಾಗೆ ರಾಜೀವ್ ಗಾಂಧಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಳ್ಳೆಯ ವಾತಾವರಣ ಹಾಗೂ ಉತ್ತಮವಾದ ಶಿಕ್ಷಕರು ಇರುವುದರಿಂದ ಈ ರಾಜೀವ್ ಗಾಂಧಿ ನಗರದ ನಾಗರಿಕರು ತಮ್ಮ ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ 1 ರಿಂದ 6 ತರಗತಿಗೆ ಒಳಗೆ ಇರುವಂತ ಮಕ್ಕಳನ್ನು ದಾಖಲಾತಿ ಮಾಡಿಸಿ ಎಂದು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ರಾಘವೇಂದ್ರ ಸಾಲುಮನೆ ಇವರು ಮಾತನಾಡಿದರು, ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ನಗರದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪರಿಮಳ ಪಾಟೀಲ್, ಶಿಕ್ಷಕರಾದ ಶೆಕ್ಷಾವಲಿ ಮಣೆಗಾರ್ ಹಾಗೂ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ.ಸಾಲುಮನೆ.ಕೂಡ್ಲಿಗಿ