30, ವರ್ಷಗಳ ಒಳ ಮೀಸಲಾತಿಗೆ ಮಾದಿಗ ಸಮುದಾಯಕ್ಕೆ ಸಿಕ್ಕ ಜಯ – ಸಿಹಿ ಹಂಚಿ ಸಂಭ್ರಮಿಸಿದ ಮುಖಂಡರು.
ಕೂಡ್ಲಿಗಿ ಅ.01

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ದಂಡೋರ ಸಂಘಟನೆ , ಅಂಬೇಡ್ಕರ್ ಯುವ ಸೇನೆ, ದಲಿತ ಸಂಘರ್ಷ ಸಮಿತಿ, ಸಾಗರ ಬಣ, ದಲಿತ ಸಂಘರ್ಷ ಸಮಿತಿ ಪ್ರೊಪೆಸರ್, ಕೃಷ್ಣಪ್ಪ ಬಣದ ಕೂಡ್ಲಿಗಿ ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಯ ಮುಖಂಡರುಗಳು ಸುಪ್ರೀಂ ಕೊರ್ಟ್ ನ 7 ನ್ಯಾಯಾಧೀಶರ ಪೀಠವು ಇ.ವಿ ಚಿನ್ನಯ್ಯ ತೀರ್ಪುನ್ನು ರದ್ದು ಗೊಳಿಸಿ ಮತ್ತು ಸಂತೋಷ ಹೆಗ್ಡೆ ರವರ ತೀರ್ಪನ್ನು ರದ್ದು ಗೊಳಿಸಿ ಮತ್ತು ಪಂಜಾಬ್ ಮತ್ತು ಹರಿಯಾಣದ ದೇವೀಂದ್ರ ಸಿಂಗ್ ಪ್ರಕರಣದ ತೀರ್ಪುನ್ನು ಎತ್ತಿ ಹಿಡಿದಿದೆ. ಅಂದರೆ ಭಾರತದ ಸಂವಿಧಾನವು ಆಯಾ ರಾಜ್ಯಗಳಲ್ಲಿ ಆಂತರಿಕ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ,ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಸಮರ್ಥನೀಯ ಎಂದು ಒಳ ಮೀಸಲಾತಿ ಪರ ತೀರ್ಪು ಪ್ರಕಟಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯ 30 ವರ್ಷಗಳ ನಿರಂತರ ಹೋರಾಟಕ್ಕೆ ಗುರುವಾರ ರಂದು ಕೊನೆಗೂ ಕಾನೂನು ಸಮರ್ಥನೆ ದೊರತಿದೆ ಎಂದು ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಸಂತೋಷ್ ಕುಮಾರ್ ಮಾತನಾಡಿದರು, ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕ ಪಂಚಾಲಕರಾದ ಡಿ.ಎಚ್. ದುರ್ಗೇಶ್ ಸಹ ಸುಪ್ರೀಂಕೋರ್ಟಿನ ತೀರ್ಪಿಗೆ ಅಭಿನಂದನೆ ಸಲ್ಲಿಸಿದರು,

ಹಾಗೆ ಡಿಎಸ್ಎಸ್ ಮುಖಂಡರಾದ ಎಸ್ ದುರ್ಗೇಶ್ ಅನೇಕ ಹೋರಾಟಗಳ ಮೂಲಕ ಹೋರಾಟ ಮಾಡಿದಂತ ರಾಜ್ಯದ ಮುಖಂಡರಿಗೂ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು, ಹಾಗೂ ಹೋರಾಟಗಾರದ ಬಸಣ್ಣ ತಿಮ್ಮನಹಳ್ಳಿ ಇವರು ಸಹ ಮಾತನಾಡಿ ರಾಜ್ಯದ ಒಳ ಮೀಸಲಾತಿಗೆ ಹೋರಾಡಿದ ಪ್ರಮುಖ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಮಹೇಶ್ ಹೆಗ್ಡಾಳ್, ಪ್ರಕಾಶ್ ವಕೀಲರು ಅಂಜನಪ್ಪ ವಕೀಲರು ಜಾಗಟ್ಗೆರೆ, ಬಸಣ್ಣ ಚೌಡಾಪುರ, ನಾಗರಾಜ ಹೆಗ್ಡಾಳ್, ವೆಂಕಟೇಶ್ ಸೋಲ್ಧರಹಳ್ಳಿ, ಪ್ರಶಾಂತ ರಾಜಶೇಖರ್, ಹೀಗೆ ಅನೇಕ ಮುಖಂಡರುಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಒಳ ಮೀಸಲಾತಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಕೂಡ್ಲಿಗಿ ತಾಲೂಕಿನ ಹೋರಾಟಗಾರರು ಪಟಾಕಿ ಹಚ್ಚುವುದರ ಜೊತೆಗೆ ಸಿಹಿ ತಿಂಡಿ ತಿನಿಸಿ ಸಂಭ್ರಮಾಚರಣೆ ಮೆರೆದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ