ನವ ದೆಹಲಿಯಲ್ಲಿ ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರು ಕರ್ನಾಟಕದ ಮಾಜಿ ಸಿ.ಎಂ ಮತ್ತು ಮಾಜಿ ಉಪ ಮುಖ್ಯಮಂತ್ರಿಗಳು ರವರನ್ನು ಭೇಟಿಯಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ ಕ್ಷಣ.
ರಾಯಚೂರು ಅ.02

ದಿನಾಂಕ :11/10/2022 ರಂದು ರಾಯಚೂರು ತಾಲೂಕಿನ ಗಿಲ್ಲೆ ಸೂಗೂರು ಕ್ಯಾಂಪ್ ನಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಮಾನ್ಯ ಕರ್ನಾಟಕ ಸರ್ಕಾರ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶ್ರೀ ಗೋವಿಂದ ಕಾರಜೋಳ್ ರವರು ಆಗಮಿಸಿದರು. ಕರ್ನಾಟಕ ಮಾದಿಗ ದಂಡೋರ(MRPS )ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರು ನಾಯಕತ್ವದಲ್ಲಿ ಮತ್ತು ಜಿಲ್ಲಾಧ್ಯಕ್ಷರು ಮಾನಪ್ಪ ಮೇಸ್ತ್ರಿ ರವರ ನೇತೃತ್ವದಲ್ಲಿ ಘೇರಾವ್ ಮತ್ತು ಕಪ್ಪುಬಟ್ಟ ಪ್ರದರ್ಶನಸುವ ಹೋರಾಟಕ್ಕೆ ಕರೆ ನೀಡಲಾಗಿತ್ತು.ಖುದ್ದಾಗಿ ಹೋರಾಟದ ಸ್ಥಳಕ್ಕೆ ಆಗಮಿಸಿದ ಮಾನ್ಯ ಮುಖ್ಯಮಂತ್ರಿಗಳು ನಮ್ಮ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿಯನ್ನು ಈಗಾಗಲೇ ಸರ್ವ ಪಕ್ಷಗಳ ಸಭೆ ತೀರ್ಮಾನ ಆಗಿದೆ ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆಂದು.

ಗಿಲ್ಲೆ ಸೂಗೂರು ಕ್ಯಾಂಪಿನಲ್ಲಿ ಬಿ.ನರಸಪ್ಪ ದಂಡೋರ ರವರಿಗೆ ಭರವಸೆ ನೀಡಲಾಗಿತ್ತು.ಕೊಟ್ಟ ಮಾತಿನಂತೆ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಶ್ರೀ ಗೋವಿಂದ ಕಾರಜೋಳ ರವರ ಸಚಿವ ಸಂಪುಟ ಶಿಫಾರಸ್ಸಿನಂತೆ 28/03/2023 ರಂದು ಕೇಂದ್ರಕ್ಕೆ ಶಿಫಾರಸ್ಸು ಗೊಳಿಸಲಾಗಿತ್ತು.

ಆದ್ದರಿಂದ ದಿನಾಂಕ:01/08/2024 ರಂದು ನಿನ್ನೆ ಸುಪ್ರೀಂ ಕೋರ್ಟ್ ನ್ ತೀರ್ಪು ಒಳ ಮೀಸಲಾತಿ ಪರವಾಗಿ ತೀರ್ಪು ನೀಡಿದ ಹಿನ್ನೆಲೆ. ಮಂದಕೃಷ್ಣ ಮಾದಿಗ ರವರ ಆದೇಶದಂತೆ. ನಿನ್ನೆ ಹೈದರಾಬಾದ್ ವಿಮಾನ ನಿಲ್ದಾಣ ದಿಂದ ದೆಹಲಿಗೆ ಪ್ರಯಾಣ ಬೆಳೆಸಿ ಇಂದು ದಿನಾಂಕ :02/08/2024 ರಂದು ನವ ದೆಹಲಿಯ ಕರ್ನಾಟಕ ಭವನದಲ್ಲಿ ಮಾದಿಗ ದಂಡೋರ (MRPS) ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು ಶ್ರೀ ಗೋವಿಂದ ಕಾರಜೋಳ ರವರನ್ನು ಭೇಟಿಯಾಗಿ ರಾಜ್ಯದಿಂದ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಗೊಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ ನಿಮಗೆ ನಮ್ಮ ಮಾದಿಗ ದಂಡೋರದ ರಾಜ್ಯ ಸಮಿತಿ ವತಿಯಿಂದ ಹಾಗೂ ನಮ್ಮ ಸಮುದಾಯದ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.