ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಪ್ರಾಣಿಗಳಿಂದ ಬಲಿಯಾದ ವ್ಯಕ್ತಿಗಳಿಗೆ ಸರ್ಕಾರ ದಿಂದ – ಪರಿಹಾರ ಒದಸಿದ ಶಾಸಕರು.
ಮೊಳಕಾಲ್ಮುರು ಆ.22

ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಚಳ್ಳಕೆರೆ ಪ್ರವಾಸಿ ಮಂದಿರ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಾಣಿಗಳಿಂದ ಮೃತಪಟ್ಟ ಹಾಗೂ ಗಾಯ ಗೊಂಡ ಕುಟುಂಬ ವರ್ಗದವರಿಗೆ ಸಾಂತ್ವಾನ ತಿಳಿಸಿ ಪರಿಹಾರದ ಚೆಕ್ಕನ್ನು ವಿತರಿಸಿದರು.ಓಬಳಾಪುರದ ಓಂಕಾರಪ್ಪ ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿ 5₹. ಲಕ್ಷ ಬೊಮ್ಮಲಿಂಗನಹಳ್ಳಿ ಅನುಸೂಯಮ್ಮ ಚಿರತೆ ದಾಳಿಯಿಂದ ಗಾಯ ಗೊಂಡ ಮಹಿಳೆ 1₹ ಲಕ್ಷ 60 ಸಾವಿರ ಗುಂತ ಕೋಲಮ್ನನಹಳ್ಳಿ ಸಾನ್ವಿ ವನ್ಯ ಪ್ರಾಣಿಯಿಂದ ಗಾಯ ಗೊಂಡ ಯುವತಿ 60₹ ಸಾವಿರಚಿತ್ರದುರ್ಗ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಟಿ. ರಾಜಣ್ಣ ವಲಯ ಅರಣ್ಯ ಅಧಿಕಾರಿಗಳಾದ ಡಿ.ಎಲ್ ಹರ್ಷ, ಎಸ್.ವಿ ಮಂಜುನಾಥ್ ಸಿಬ್ಬಂದಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು