ಸಮಕಾಲೀನ ತೆಲುಗು ಅನುವಾದಿತ ಕವಿತೆಗಳ ಓದು ಮತ್ತು ಚರ್ಚೆ – ದೊಡ್ಡೇರಿ ಶ್ರೀ ನಿವಾಸರಾಜು.
ಚಳ್ಳಕೆರೆ ಸ.02

ಚಳ್ಳಕೆರೆಯಲ್ಲಿ ಹೊಸದಾಗಿ ರಚನೆಯಾದ ‘ಚಳ್ಳಕೆರೆ ಬಳಗ’ ಮತ್ತು ಹುಣ್ಣಿಮೆ ಪ್ರಕಾಶನದ ವತಿಯಿಂದ ಕತೆಗಾರ ಎನ್.ಆರ್. ತಿಪ್ಪೇಸ್ವಾಮಿ ಅವರ ಮನೆ ‘ಅವನಿ’ ಮೇಲ್ಛಾವಣಿಯಲ್ಲಿ ಈ ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಯುತ ಶ್ರೀನಿವಾಸರಾಜು ದೊಡ್ಡೇರಿ ಅನುವಾದಿಸಿದ ಸಮಕಾಲೀನ ತೆಲುಗು ಕವಿತೆಗಳ ಓದು ಮತ್ತು ಚರ್ಚೆ ಅರ್ಥಪೂರ್ಣವಾಗಿತ್ತು. ಮದ್ದೂರಿ ನಾಗೇಶ್ ಬಾಬು, ಪ್ರೊ.ಚಲ್ಲಪಲ್ಲಿ ಸ್ವರೂಪರಾಣಿ, ರವಿಕುಮಾರ್ ನೂಕತೋಟಿ, ವಿಲ್ಸನ್ ಸುಧಾಕರ್, ಇಂಡಸ್ ಮಾರ್ಟಿನ್ ಅವರ ಕವಿತೆಗಳ ವಾಚಿಸಲಾಯಿತು. ನಂತರ ಈ ಕವಿತೆಗಳ ಪ್ರಸ್ತುತತೆ, ಕವಿತೆಗಳ ಆಶಯ, ನುಡಿಗಟ್ಟುಗಳ ಬಳಕೆಯ ಬಗ್ಗೆ ಚರ್ಚಿಸಲಾಯಿತು.

ಗ್ರಾಮೀಣ ಸಾಹಿತ್ಯ ಪರಿಷತ್ ಕಟ್ಟುವ ಮೂಲಕ ಮೂರು ದಶಕದಿಂದಲೂ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ ಸರ್ ಭಾಗವಹಿಸಿ ಒಂದಷ್ಟು ಅರ್ಥಪೂರ್ಣ ಮಾತುಗಳನ್ನಾಡಿದರು, ಈ ತರಹದ ಸರಳವಾದ ಯಾವುದೇ ರೀತಿಯ ಶೂನ್ಯ ಬಂಡವಾಳದಲ್ಲಿ ಕಾರ್ಯಕ್ರಮಗಳು ಎಲ್ಲಾ ಕಡೆಗೂ ನಡೆಯಬೇಕು ಎಂದು ಸಲಹೆ ನೀಡಿದರು. ಸಾಹಿತಿಗಳು ಮತ್ತು ಯುವ ಕವಯಿತ್ರಿ ಆದ ಶ್ರೀಮತಿ ಶಬ್ರೀನಾ ಮಹಮದ್ ಅಲಿ ರವರು ಮಾತನಾಡಿ ಎಲ್ಲ ಕವಿ ಮಿತ್ರರೂ ಸಮಾನ ಮನಸ್ಕರು ಒಂದೆಡೆ ಸೇರಿ ಹೀಗೆ ವಿವಿಧ ಸಾಹಿತ್ಯ ವಿಷಯಗಳ ಬಗೆಗಿನ ಅರ್ಥಪೂರ್ಣ ಚರ್ಚೆಗಳನ್ನು ನಮ್ಮ ಕನ್ನಡ ನಾಡು ನುಡಿ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಈ ರೀತಿಯ ಆರೋಗ್ಯಕರ ಚರ್ಚೆಗಳು ಮತ್ತು ವಿಚಾರ ಗೋಷ್ಠಿಗಳನ್ನು ಹಮ್ಮಿ ಕೊಳ್ಳುವುದರಿಂದ ಇತ್ತೀಚಿನ ಯುವ ಕವಿಗಳಲ್ಲಿ ಹುಮ್ಮಸ್ಸು ಹಾಗೂ ಸ್ಪೂರ್ತಿಯನ್ನು ತುಂಬುತ್ತವೆ ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮೋದೂರು ತೇಜ, ಅಶೋಕ್ ಅಗಿಲ್, ವೇದಾಂತ ,ಅರುಣ್ ಜೋಳದ ಕೂಡ್ಲಿಗಿ, ನಿಸರ್ಗ ಗೋವಿಂದರಾಜ, ಜಭೀವುಲ್ಲಾ ಎಂ ಆಸದ್ ಮೊಳಕಾಲ್ಮೂರು, ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ,ಕೋರ್ಲ ಕುಂಟೆ ತಿಪ್ಪೇಸ್ವಾಮಿ,ಶಿವಕುಮಾರ್,ರಂಗಸ್ವಾಮಿ,ಮಹಮದ್ ಅಲಿ ಎಂ.ಐ, ವಿಜಯಲಕ್ಷ್ಮಿ, ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕವಿಗಳು ಮತ್ತು ಸಾಹಿತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.