ಗಜೇಂದ್ರಗಡ ಪುರಸಭೆ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಅಧ್ಯಕ್ಷ ಸುಭಾಷ್ ಮ್ಯಾಗೇರಿ, ಸವಿತಾ ಬಿದರಳ್ಳಿ ಉಪಾಧ್ಯಕ್ಷರ ಆಯ್ಕೆ.

ಗಜೇಂದ್ರಗಡ ಸ.03

ಸ್ಥಳೀಯ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಹಲವು ಅಚ್ಚರಿ ನಡೆದವು ಅಧಿಕೃತ ಅಭ್ಯರ್ಥಿಯ ಸೋಲಿನೊಂದಿಗೆ ಬಿಜೆಪಿ ಮುಖಭಂಗ ಅನುಭವಿಸಿದರೆ, ತನ್ನ ಒಗ್ಗಟ್ಟನ್ನು ಕಾಯ್ದು ಕೊಂಡು ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಜಯದ ನಗೆ ಬೀರಿತು. ತೀವ್ರ ಕುತೂಹಲ ಕೆರಳಿಸಿದ್ದ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುಣಾವಣೆಯು ಚುನಾವಣಾಧಿಕಾರಿ ಗಜೇಂದ್ರಗಡ ತಹಸೀಲ್ದಾರ ಕೀರಣ ಕುಮಾರ ಕುಲಕರ್ಣಿ ಅವರ ನೇತೃತ್ವದಲ್ಲಿ ಜರುಗಿತು.ಬೆಳಿಗ್ಗೆ ಚುಣಾವಣಾ ಪ್ರಕ್ರಿಯೆ ಪ್ರಾರಂಭ ವಾಗುತ್ತಿದ್ದಂತೆ ಮೊದಲು ಸಿದ್ದಪ್ಪ ಬಂಡಿ ನೇತೃತ್ವದಲ್ಲಿ ಪುರಸಭೆ ಆಗಮಿಸಿದ ಕಾಂಗ್ರೇಸ್‌ ಪರ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ 19 ನೇ ವಾರ್ಡಿನ ಸುಭಾಸ್ ಮ್ಯಾಗೇರಿ (ಅನುಮೋದಕರ ಕೈಯಿಂದ) ಉಪಾಧ್ಯಕ್ಷ ಸ್ಥಾನಕ್ಕೆ 15 ನೇ. ವಾರ್ಡಿನ ಸವಿತಾ ಬಿದರಳ್ಳಿ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ೨ ನೇ. ವಾರ್ಡ್ನ ಯಮನಪ್ಪ ತಿರಕೋಜಿ, ಅಧ್ಯಕ್ಷ ಸ್ಥಾನಕ್ಕೆ ಹಾಗೂ ೪ ನೇ ವಾರ್ಡ್ನ ಸುಜಾತಾಬಾಯಿ ಸಿಂಗ್ರಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು ೨೩ ಸದಸ್ಯ ಸ್ಥಾನವನ್ನು ಹೊಂದಿರುವ ಅದರಲ್ಲಿ ಬಿಜೆಪಿ ಬಂಡಾಯ ೭ ಸದಸ್ಯರು ಹಾಗೂ ಕಾಂಗ್ರೆಸ್‌ನ ೫ ಸದಸ್ಯರು, ರೋಣ ಶಾಸಕ ಜಿ.ಎಸ್ ಪಾಟೀಲ ಸೇರಿ ಒಟ್ಟು ೧೩ ಸದಸ್ಯರ ಬೆಂಬಲ ದಿಂದ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದರು. ಒಟ್ಟು 23 ಸದಸ್ಯ ಬಲದ ಗಜೇಂದ್ರಗಡ ಪುರ ಸಭೆಗೆ ಮಧ್ಯಾಹ್ನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸುಭಾಸ್‌ ಮ್ಯಾಗೇರಿ ಮತ್ತು ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಪರ ಕಾಂಗ್ರೆಸ್ಸಿನ 5 ಸದಸ್ಯರು ಮತ್ತು ಬಿಜೆಪಿಯ 7 ಬಂಡಾಯ ಸದಸ್ಯರು ಮತ್ತು ಶಾಸಕ ಜಿ.ಎಸ್. ಪಾಟೀಲ್‌ ಮತ ನೀಡಿದ್ದರಿಂದ 13 ಸದಸ್ಯರ ಬೆಂಬಲ ದಿಂದ ಆಯ್ಕೆ ಯಾದರು.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಇಬ್ಬರು ಅಭ್ಯರ್ಥಿಗಳು 11 ಮತಗಳನ್ನು ಪಡೆಯಲು ಮಾತ್ರ ಶಕ್ತರಾದರು. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಸ್. ಪಾಟೀಲ್‌. ಪಕ್ಷದಲ್ಲಿನ ಸಮನ್ವಯ ಕೊರತೆ, ತಾರತಮ್ಯ ನೀತಿ, ಕೆಲವೇ ಸದಸ್ಯರ ಕೇಂದ್ರೀಕೃತ ಆಡಳಿತ ಮತ್ತು ಅನುದಾನ ಹಂಚಿಕೆಯಲ್ಲಿ ತಾರತಮ್ಯವನ್ನು ವಿರೋಧಿಸಿ ನಮ್ಮ ಬೆಂಬಲ ಕೇಳಿದರು ಆದ್ದರಿಂದ ಕಡಿಮೆ ಅವಧಿಯಲ್ಲಿ ಗಜೇಂದ್ರಗಡ ಅಭಿವೃದ್ಧಿಯ ದೃಷ್ಟಿ ಕೋನದಿಂದ ನಾವೂ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ ಎಂದರು. ನೂತನ ಅಧ್ಯಕ್ಷ ಸುಭಾಸ್ ಮ್ಯಾಗೇರಿ ಮಾತನಾಡಿ ಗಜೇಂದ್ರಗಡ ಅಭಿವೃದ್ಧಿ ಒಂದೇ ದೃಷ್ಟಿ ಕೋನದಿಂದ ನಾವೂ ಬಂಡಾಯವೇದ್ದು ಈ ನಿರ್ಧಾರ ಕೈ ಗೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಿದ್ದಪ್ಪ ಬಂಡಿ, ಮಿಥುನ್ ಪಾಟೀಲ,ಶಿವರಾಜ ಘೋರ್ಪಡೆ, ಮುರ್ತುಜ ಡಾಲಯತ, ವೆಂಕಟೇಶ ಮುದಗಲ, ರಾಜು ಸಾಂಗ್ಲಿಕರ, ಶ್ರೀಧ‌ರ್ ಬಿದರಳ್ಳಿ, ಬಸವರಾಜ ಶೀಲವಂತರ, ಮಂಜುಳಾ ರೇವಡಿ, ಅಜಿತ್ ಬಾಗಮರ, ವಿ. ಬಿ. ಸೋಮನಕಟ್ಟಿಮಠ, ಸಿದ್ದು ಗೊಂಗಡಶೆಟ್ಟಿ, ಅರ್ಜುನ ರಾಠೋಡ, ಚಂಬಣ್ಣ ಚವಡಿ, ಪ್ರಬಣ್ಣ ಚವಡಿ, ಹನಮಂತ ಗೌಡ್ರ, ಅಂದಪ್ಪ ರಾಠೋಡ, ಅರಿಹಂತ ಬಾಗಮಾರ, ಬಸವರಾಜ ಚೆನ್ನಿ. ಶ್ರೀಧರ ಗಂಜೀಗೌಡ್ರ, ಶಶಿ ಒಕ್ಕಲರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button