ಜೀವದ ರಕ್ಷಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು – ಸಿ.ಪಿ.ಐ ಬೀಳಗಿ.
ರೋಣ ಸ.12

ನಗರದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿಯ ನಿಮಿತ್ಯವಾಗಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳಿಗೆ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಜರುಗಿತು. ನಗರ ಮತ್ತು ತಾಲೂಕಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು. ಅತಿಯಾದ ವೇಗದಿಂದ ಅಪಘಾತ ತಡೆಯಲು ಸರ್ಕಾರ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೆ ತಂದರು ಸಾರ್ವಜನಿಕರು ನಿಯಮ ಪಾಲನೆ ಮಾಡದೆ ತಮ್ಮ ಜೀವದ ಮೇಲೆ ಕಾಳಜಿ ವಹಿಸದೆ ದ್ವಿಚಕ್ರ ಸವಾರರು ಹೆಲ್ಮೆಟ್ ಇಲ್ಲದೆ ರಸ್ತೆಯ ಮೇಲೆ ಸಂಚರಿಸುತ್ತಿದ್ದಾರೆ. ಎಲ್ಲ ರೀತಿಯಾಗಿ ಹೆಲ್ಮೆಟ್ ಕಡ್ಡಾಯ ಎಂದು ಜಾಗೃತಿ ಮೂಡಿಸುವ ಕೆಲಸ ರೋಣ ಪೋಲಿಸ್ ಠಾಣೆಯಿಂದ ಅನೇಕ ಸಲ ಸಲಹೆ ಸೂಚನೆ ನೀಡಲಾಗಿದೆ ಆದರೂ ಬೈಕ್ ಸವಾರರು ನಿಯಮ ಪಾಲಿಸದೆ ಇರುವುದು ತಮ್ಮ ಜೀವದ ಮೇಲೆ ಚೆಲ್ಲಾಟ ಆಡುತ್ತಿರುವುದು ಸರಿ ಇರುವುದಿಲ್ಲ. ದ್ವಿಚಕ್ರ ವಾಹನಕ್ಕಿಂತಲೂ ತಮ್ಮ ಜೀವ ಅಮೂಲ್ಯವಾದದ್ದು ಅದನ್ನು ಎಲ್ಲರೂ ರಕ್ಷಣೆ ಮಾಡಿ ಕೊಳ್ಳಬೇಕಿದೆ, ರಸ್ತೆಯ ಸಂಚಾರಿ ನಿಯಮಗಳನ್ನು ಎಲ್ಲರೂ ಅನುಸರಿಸ ಬೇಕಿದೆ. ಗಣೇಶ್ ಚತುರ್ಥಿಯ ಹಬ್ಬದಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಬಟ್ಟೆ ವಿತರಣೆ ಮಾಡುವ ಬದಲು ಹೆಲ್ಮೆಟ್ ವಿತರಣೆ ಮಾಡಿ ನಗರ ಮತ್ತು ತಾಲೂಕಿನ ದ್ವಿಚಕ್ರ ವಾಹನ ಸವಾರರಿಗೆ ರೋಣ ಪೊಲೀಸ್ ಠಾಣೆಯಿಂದ ಹೆಲ್ಮೆಟ್ ವಿತರಣೆ ಕಾರ್ಯ ಜಾಗೃತಿ ಮೂಡಿಸುವಂತೆ ಆಗಿರುತ್ತದೆ. ಮನುಷ್ಯನಿಗೆ ಬಟ್ಟೆಗಿಂತಲೂ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೆ ಜೀವ ಮುಖ್ಯ ಎಂದು ರೋಣ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಕಾರ್ಯ ಮೆಚ್ಚುವಂತೆ ಆಗಿರುತ್ತದೆ, ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿರುತ್ತಾರೆ.ನಗರ ಮತ್ತು ಗ್ರಾಮಾಂತರ ಪ್ರದೇಶದ ಬೈಕ್ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಜೀವದ ರಕ್ಷಣೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಿ.ಪಿ.ಐ ಎಸ್.ಎಸ್ ಬಿಳಗಿ. ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಮಾಡುವುದರ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಜೀವದ ರಕ್ಷಣೆ ಮತ್ತು ಹೆಲ್ಮೆಟಿನ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ನರಗುಂದ ಡಿ.ವೈ.ಎಸ್ಪಿ ಪ್ರಭುಗೌಡ ಕಿರದಳ್ಳಿ. ಪಿ.ಎಸ್.ಐ ಪ್ರಕಾಶ್ ಬಣಕಾರ. ಅಪರಾಧ ವಿಭಾಗ ಪಿ.ಎಸ್.ಐ ವಿ. ಎಸ್. ಚವಡಿ. ಎ.ಎಸ್.ಐ ಎಸ್.ಬಿ. ಪವಾಡೆ. ಮಂಜುನಾಥ್ ಕುರಿ. ರಮೇಶ್ ಜುಂಗನ್ನವರ್. ಕುಮಾರ್ ತಿಗರಿ. ಎನ್.ಎಸ್. ಚಿಮ್ಮನಕಟ್ಟಿ. ಪುಂಡಲೀಕಪ್ಪ ದಾಸರ. ಹನುಮಂತ ಹುಲ್ಲೂರ. ಬಸಮ್ಮ ಪಾಟೀಲ. ಎಸ್. ಹೆಚ್. ಶಂಕ್ರಿ. ಸೇರಿದಂತೆ ಅನೇಕರು ಹೆಲ್ಮೆಟ್ ಹಂಚಿಕೆ ಮತ್ತು ಜಾಗೃತಿ ಕಾರ್ಯದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ