ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, 66 ಕಿಲೋಮೀಟರ್ ಮಾನವ ಸರಪಳಿ – ಡಾ, ಕೆ.ಜೆ ಕಾಂತರಾಜ್.
ತರೀಕೆರೆ ಸ.12

ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 15 ರಂದು ಚಾಮರಾಜನಗರ ದಿಂದ ಬೀದರ್ ವರೆಗೆ ಮಾನವ ಸರಪಳಿ ನಿರ್ಮಿಸ ಬೇಕೆಂದು ಮಾರ್ಗದರ್ಶನ ನೀಡಿದೆ ಎಂದು ಉಪ ವಿಭಾಗ ಅಧಿಕಾರಿ ಡಾ.ಕೆ ಜೆ ಕಾಂತರಾಜ್ ರವರು ದಿನಾಂಕ 11- 9- 2024 ರಂದು ಉಪ ವಿಭಾಗ ಮಟ್ಟದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಾಗಡಿ ಅಂಡ್ ಪೋಸ್ಟ್ ನಿಂದ ತರೀಕೆರೆ ತಾಲೂಕು ಗಡಿ ಭಾಗವಾದ ಎಂ.ಸಿ ಹಳ್ಳಿಯವರೆಗೆ ಮಾನವ ಸರ್ಪಳಿಯನ್ನು ಮಾಡಿ ಸಂವಿಧಾನ ಪೀಠಿಕೆ ಓದುವುದು ಹಾಗೂ ಕಡೂರು ತಾಲೂಕಿಗೆ ಸಂಬಂಧಿಸಿದಂತೆ 37 ಕಿಲೋಮೀಟರ್ ಮತ್ತು ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ 29 ಕಿಲೋಮೀಟರ್ ಒಟ್ಟು 66 ಕಿಲೋಮೀಟರ್ ವ್ಯಾಪ್ತಿಯ ವರೆಗೆ ಮಾನವ ಸರಪಳಿ ನಿರ್ಮಿಸ ಬೇಕು ಎಂದು ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದಾರೆ. ಕಡೂರು ಮತ್ತು ತರೀಕೆರೆ ರೂಟ್ ಮಾಹಿತಿಯನ್ನು ತಿಳಿಸಿರುತ್ತಾರೆ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪ್ರತಿ ಕಿ.ಮೀ ಗೆ ಒಬ್ಬರು ಹಾಗೂ 500 ಮೀಟರ್ ಗೆ ಒಬ್ಬರು ಮತ್ತು 100 ಮೀಟರ್ ಗೆ ಒಬ್ಬರಂತೆ ಪ್ರತಿ ನಿಧಿಗಳನ್ನು ನೇಮಿಸಲಾಗಿದೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ,ನೃತ್ಯ ಸ್ಪರ್ಧೆಗಳು, ಗುಂಪು ಸ್ಪರ್ಧೆಗಳು,ಬೀದಿ ನಾಟಕಗಳು, ವೀರಗಾಸೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ತಿಳಿಸಿದರು. ಶಾಲಾ ಮಕ್ಕಳಿಗೂ ಮತ್ತು ಸಾರ್ವಜನಿಕರಿಗೂ ಸಂಘ ಸಂಸ್ಥೆಯವರು ಮಾನವ ಸರಪಳಿಯಲ್ಲಿ ಇರುವವರಿಗೆ ಕುಡಿಯುವ ನೀರು ವಿತರಿಸಲು ಪ್ರತಿ 500 ಮೀಟರ್ ಗೆ ಒಬ್ಬರಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಸಂವಿಧಾನ ಪೀಠಿಕೆಯನ್ನು ಅಂದು ಬೆಳಗ್ಗೆ 9: 15 ರಿಂದ ಓದಲು ಕ್ರಮ ವಹಿಸಲಾಗಿದೆ ಮಾನವ ಸರಪಳಿ ನಿರ್ಮಿಸುವ ಎಲ್ಲಾ ರಸ್ತೆಗಳಲ್ಲೂ ಪೊಲೀಸ್ ಬಂದೋಬಸ್ತು ಪ್ರತಿ 100 ಮೀಟರ್ ಗೆ ಒಬ್ಬರಂತೆ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಎಲ್ಲಾ ಸಂಘ ಸಂಸ್ಥೆಯವರು, ಸಾರ್ವಜನಿಕರು, ಶಾಲಾ ಮಕ್ಕಳು, ಸರ್ಕಾರಿ ನೌಕರರು, ಅಧಿಕಾರಿಗಳು ಕರ್ತವ್ಯದ ದಿನವೆಂದು ಭಾವಿಸಿ ಮಾನವ ಸರ್ಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿ ಕೊಡಬೇಕೆಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತರೀಕೆರೆ. ಎನ್.ವೆಂಕಟೇಶ.ಚಿಕ್ಕ ಮಗಳೂರು.