ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೆ ಆರೋಗ್ಯ ಇಲಾಖೆ ಸಿದ್ದವಾಗಿದೆ – ಡಾ, ದೇವರಾಜ್.
ತರೀಕೆರೆ ಸ.13
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದಂತೆ ದಿನಾಂಕ 15-9-2024 ರಂದು ಭಾನುವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೆ ಸಕಲ ಸಿದ್ಧತೆ ಮಾಡಿ ಕೊಂಡಿದ್ದೇವೆ ಎಂದು ಆರೋಗ್ಯ ಅಧಿಕಾರಿಯಾದ ಡಾ. ದೇವರಾಜ್ ಹೇಳಿದರು. ಅವರು ಇಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು ಪ್ರತಿಯೊಂದು ಕಿಲೋಮೀಟರ್ ಗೆ ಒಂದು ಸಾವಿರ ಜನರು ಸಾರ್ವಜನಿಕರು ಶಾಲಾ ಮಕ್ಕಳು ಮಾನವ ಸರಪಳಿ ಮಾಡಲು ಸಿದ್ಧತೆ ಮಾಡಿ ಕೊಂಡಿರುವುದರಿಂದ ನಮ್ಮ ಉಪ ವಿಭಾಗ ಆಸ್ಪತ್ರೆ ಯಾವುದೇ ಅಹಿತಕರ ಘಟನೆ ನಡೆದರು. ನಿಭಾಯಿಸಲು ಸಿದ್ಧರಿದ್ದೇವೆ ಸದರಿ ಭಾನುವಾರ ನಮ್ಮ ಆಸ್ಪತ್ರೆ ಸಿಬ್ಬಂದಿಗಳಿಗೆ ರಜೆ ಇರುವುದಿಲ್ಲ, ಬೆಳಿಗ್ಗೆ ಇಂದ ಮಧ್ಯಾಹ್ನದವರೆಗೆ ಹಾಜರಿರಲು ಸೂಚಿಸಿದ್ದೇವೆ. ಹಾಗೂ ಯಾರಿಗೂ ರಜೆ ಮಂಜೂರು ಮಾಡಿರುವುದಿಲ್ಲ, ಸಾಧ್ಯವಾದರೆ ಪಟ್ಟಣದ ಎಂ ಜಿ ಸರ್ಕಲ್ ನಲ್ಲಿ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಮಾನವ ಸರಪಳಿಯಲ್ಲಿ ಭಾಗವಹಿಸುತ್ತೇವೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ಯಶಸ್ವಿ ಗೊಳಿಸಲು ನಮ್ಮ ಸಹಕಾರವೂ ಇದೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತರೀಕೆರೆ.ಎನ್.ವೆಂಕಟೇಶ್.ಚಿಕ್ಕ ಮಗಳೂರ