ಟೇಬಲ್ ಟೆನಿಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ.
ಚಿಕ್ಕೋಡಿ ಸ.14

ಶೈಕ್ಷಣಿಕ ಜಿಲ್ಲೆಯ ಸನ್ 2024-25 ನೇ ಸಾಲಿನಲ್ಲಿ ನಿಪ್ಪಾಣಿಯ ಜಿ.ಐ.ಬಾಗೇಬಾಡಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಅಥಣಿಯ ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ. ಕಾಲೇಜು ವಿದ್ಯಾರ್ಥಿನಿಯರಾದ ಕುಮಾರಿ. ಲಕ್ಷ್ಮೀ ಕಾಂಬಳೆ ಮತ್ತು ಭಕ್ತಿ ಪವಾರ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ, ರಾಮ.ಬಿ.ಕುಲಕರ್ಣಿ ಮತ್ತು ಆಡಳಿತ ಮಂಡಳಿಯ ಸಂಚಾಲಕರಾದ ಸಂದೀಪ್ ಸಂಗೋರಾಮ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರರಾದ ಎಂ.ಪಿ.ಮೇತ್ರಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಎಂ ಶರ್ಮಾ.ಬೆಳಗಾವಿ.