ವಿಶ್ವ ಕರ್ಮ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನೆ ಆಚರಣೆ.
ಖಾನಾ ಹೊಸಹಳ್ಳಿ ಸ.17

ಇಲ್ಲಿನ ನಾಡ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ದೇವಶಿಲ್ಪಿ ವಿಶ್ವಕರ್ಮರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಉಪ ತಹಶೀಲ್ದಾರ್ ಜಿ ಚಂದ್ರಮೋಹನ್ ಅವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಯ ಹರಿಕಾರ ಸರದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧೀಜಿ, ಡಾ, ಬಿ.ಆರ್. ಅಂಬೇಡ್ಕರ್, ಮತ್ತು ವಿಶ್ವಕರ್ಮ ರವರ ಭಾವ ಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಿಜಾಮನ ದಾಸ್ಯತನದಲ್ಲಿ ಸಿಲುಕಿ ನಲುಗುತ್ತಿರುವ ಈ ನಮ್ಮ ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ 15 ಅಗಸ್ಟ್ 1947 ರಂದು ಸ್ವಾತಂತ್ರ್ಯ ಸಿಗಲಿಲ್ಲ. ಸ್ವಾಮಿ ರಮಾನಂದ ತೀರ್ಥರು ಹಾಗೂ ಮುಂತಾದ ಮಹನೀಯರ ಹೋರಾಟದ ಫಲದಿಂದ 1 ವರ್ಷ 1 ತಿಂಗಳು 2 ದಿನಗಳ ನಂತರ 1948 ಸೆಪ್ಟಂಬರ 17 ರಂದು ನಮ್ಮ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತು.

ಹಾಗೂ ವಿಶ್ವಕರ್ಮರನ್ನು ನೆನಪಿಸುವ ಪುಣ್ಯ ದಿನವಾಗಿದೆ ಇಂದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರು ಸಿದ್ದಪ್ಪ ಹೆಚ್, ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್.ಎಂ ಚನ್ನಬಸಯ್ಯ, ಕೆ.ಕೊಟ್ರೇಶ್, ಅಂಬುಜಾಕ್ಷಿ, ಶ್ರೀನಿವಾಸ ಕೊಂಡಿ, ಇಮ್ರಾನ್, ಕೊಟ್ರೇಶ್, ಅನಿತಾ ಪೂಜಾರ್, ಗ್ರಾಮ ಪಂಚಾಯಿತಿ ಸದಸ್ಯ ಹೊನ್ನೂರಪ್ಪ, ಗ್ರಾಮದ ಮುಖಂಡರಾದ ನಡಲು ಮನೆ ತಿಪ್ಪೇಸ್ವಾಮಿ, ಫೋಟೋ ನಾಗರಾಜ, ಬಂಡೆ ಬಸವರಾಜಯ್ಯ, ಕೇಶವಾಚಾರ್ಯ, ಲೋಕೇಶ ಆಚಾರಿ, ಸುಬ್ರಹ್ಮಣ್ಯ, ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ನಾಡ ಕಚೇರಿ ಗ್ರಾಮ ಸಹಾಯಕರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.