ಮಲ್ಲು ಕೆಂಭಾವಿಗೆ ಬಸವ ಶ್ರೀರಕ್ಷೆ ಗೌರವ.
ಹಿಕ್ಕನಗುತ್ತಿ ಸ.19

ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಅನಂತನ ಹುಣ್ಣಿಮೆಯ ಪ್ರಯುಕ್ತ ಬುಧವಾರ ಹಮ್ಮಿಕೊಂಡ ೭ ನೇಯ ಮಾಸಿಕ ಶಿವಾನುಭವ ಕಾರ್ಯಕ್ರಮ, ಶಿವಶರಣ ಹೂಗಾರ ಮಾದಯ್ಯ ಜಯಂತಿ, ಪ್ರವಚನ ಪಿತಾಮಹ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ಜಯಂತಿ, ರಾಷ್ಟ್ರೀಯ ಬಸವದಳ ಸಂಸ್ಥಾಪನಾ ದಿನ, ಶರಣ ದಿ.ಡಾ, ಎಂ.ಎಂ.ಕಲಬುರಗಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬ್ರಹ್ಮ ದೇವನ ಮಡುವಿನ ವಿಜಯವಾಣಿ ಪತ್ರಕರ್ತ ಮಲ್ಲಿಕಾರ್ಜುನ ಕೆಂಭಾವಿ, ಸಮಾಜ ಸೇವಕ ಚಂದ್ರಶೇಖರ ಕೆಂಭಾವಿ ಅವರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಲಾಯಿತು. ಈ ವೇಳೆ ಶ್ರೀಮಠದ ಪ್ರಭುಲಿಂಗ ಶರಣರು,ಕಾನಿಪ ಅಧ್ಶಕ್ಷ ಆನಂದ ಶಾಬಾದಿ, ಪತ್ರಕರ್ತ ಮಹಾಂತೇಶ ನೂಲನ್ನವರ, ಶರಣಬಸಪ್ಪ ಗಂಗಶೆಟ್ಟಿ, ಜಗದೀಶ ಕಲಬುರ್ಗಿ, ಕಾಶೀನಾಥ ಸುಳ್ಳೋಳ್ಳಿ, ಚಿಂಚೋಳ್ಳಿಯ ಕಲ್ಲಾಲಿಂಗೇಶ್ವರ ಮಠದ ಶರಣ ಬಸವ ಶರಣರು, ಮಲ್ಲನಗೌಡ ಪಾಟೀಲ, ಡಾ, ಬಸವರಾಜ ಹೂಗಾರ, ಡಾ, ಚಂದ್ರಶೇಖರ ಹೂಗಾರ, ಸಂತೋಷ ಹೊಟಗಾರ, ಸಾಹೇಬಗೌಡ ಮುಳಸಾವಳಗಿ, ಮಲಕಣ್ಣ ತಳವಾರ ಸೇರಿದಂತೆ ಶ್ರೀಮಠದ ಭಕ್ತರು ಸೇರಿದಂತೆ ಸಮಾಜದ ಮುಖಂಡರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ