ಶಾಲಾ ಆಡಳಿತ ಮಂಡಳಿಯಿಂದ ನೂತನ ಅಧ್ಯಕ್ಷರುಗಳಿಗೆ ಸನ್ಮಾನ.
ಮಸ್ಕಿ ಸ.19

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಮಸ್ಕಿ ಶಾಲೆಯಲ್ಲಿ ನೂತನವಾಗಿ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾದ ನೂತನ ಅಧ್ಯಕ್ಷರುಗಳಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಶಾಲೆಯಲ್ಲಿ ಓದಿದ 15 ನೇ ವಾರ್ಡ್ ನ ಸದಸ್ಯರಾಗಿ ಆಯ್ಕೆಯಾಗಿ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಯ್ಯ ಅಂಬಾಡಿ ಹಾಗೂ ಉಪಾಧ್ಯಕ್ಷರಾದ ಗೀತಾ ಶಿವರಾಜ ಬುಕ್ಕಣ್ಣ ಶಾಲಾ ಆಡಳಿತ ಮಂಡಳಿ ವತಿಯಿಂದ ಚಿಕ್ಕ-ಚೊಕ್ಕ ಕಾರ್ಯಕ್ರಮಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಮಾತನಾಡಿ ನಾನು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ಈ ಸ್ಥಾನದಲ್ಲಿ ಇದ್ದೇನೆ ಎಂದರೇ ಸರಕಾರಿ ಶಾಲೆಯ ಶಿಕ್ಷಣವೇ ಕಾರಣ ಹಾಗಾಗಿ ಈ ಹಿಂದೆ ಎಂಜೀನಿಯರ್ ಸರ್ ಎಂ ವಿಶ್ವೇಶ್ವರಯ್ಯ ರವರು ಅವರು ಎಲ್ಲೇ ದಾರಿಯಲ್ಲಿ ನಡೆದು ಹೋಗುತ್ತಿದ್ದರು ಅವರು ಎಲ್ಲೇ ಇದ್ದರೂ ಇಷ್ಟೇ ಸಮಯ ಎಂದು ಸಾರ್ವಜನಿಕರ ಮನೆ ಮಾತಾಗಿತ್ತು. ಅದೇ ರೀತಿ ಈ ದೇಶದ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡಾ ಸರಕಾರಿ ಶಾಲೆಯಲ್ಲಿ ಕಲಿತು ಇಡೀ ವಿಶ್ವವೇ ತಲೆ ಎತ್ತಿ ನೋಡುವಂತಹ ಸಂವಿಧಾನ ನೀಡಿದರು. ಆದ್ದರಿಂದ ಇವರುಗಳ ಕಾರ್ಯ ಶ್ಲಾಘನೀಯವಾದದ್ದು ನೀವು ಕೂಡ ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿಯೇ ನಡೆಯಿರಿ ಎಂದು ಪುರಸಭೆ ಅಧ್ಯಕ್ಷರು ಮಲ್ಲಯ್ಯ ಅಂಬಾಡಿ ಅವರು ನೆರೆದ ವಿದ್ಯಾರ್ಥಿಗಳಿಗೆ ಕರೇ ನೀಡಿದರು. ನಂತರ ರಾಮಸ್ವಾಮಿ ಸಿ.ಆರ್.ಪಿ,ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಕಾಂತಮ್ಮ ಹಾಗೂ ಶಾಲಾ ಆಡಳಿತ ಮಂಡಳಿ ಶಿಕ್ಷಕರ ಸಮ್ಮುಖದಲ್ಲಿ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಹೆಚ್ಚುವರಿ ಶಾಲಾ ಕೊಠಡಿ ಹಾಗೂ ವಿವಿಧ ಬೇಡಿಕೆಗಳನ್ನು ಆಲಿಸಿ ಇದೇ ತಿಂಗಳು 28 ರಂದು ಜರುಗುವ ಸಾಮಾನ್ಯ ಸಭೆಯಲ್ಲಿ ಈ ಎಲ್ಲಾ ವಿಷಯದ ಕುರಿತು ಚರ್ಚಿಸಿ ಅಭಿವೃದ್ಧಿ ಮಾಡೋಣ ಎಂದು ಪುರಸಭೆ ಅಧ್ಯಕ್ಷರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರಾಮಣ್ಣ ಹಾಲಾಪುರ ಎಸ್,ಡಿ.ಎಂ.ಸಿ ಅಧ್ಯಕ್ಷರು, ಶಿವರಾಜ್ ಬುಕ್ಕಣ್ಣ ಮೇಸ್ತ್ರಿ,ತಿಮ್ಮಣ್ಣ ಗುಡಸಲಿ, ರವಿ ಡಿ ಚಿಗರಿ, ಮಲ್ಲಯ್ಯಗಜೀನಿ,ಮಂಜಪ್ಪ ತೆಳಗಡೆ ಮನೆ,ಶಾಲಾ ಶಿಕ್ಷಕಿಯರಾದ ಸಹ ಶಿಕ್ಷಕಿ ಮಧುಮತಿ, ಅಥಿತಿ ಶಿಕ್ಷಕರಾದ ಮಲ್ಲಮ್ಮ, ಪವಿತ್ರಾ, ಕಲಾವತಿ, ಶಿವಾನಂದ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ