ಬಿಜೆಪಿ ಸಂಘಟನಾ ಪರ್ವ ಮಹಾ ಸಂಪರ್ಕ ಅಭಿಯಾನ ಸದಸ್ಯತಾ ಅಭಿಯಾನ ಅಂಗವಾಗಿ.
ಸಿಂದಗಿ ಸ.19

ಸಿಂದಗಿ ಮತ ಕ್ಷೇತ್ರದ ಸಿಂದಗಿ ನಗರದ 22 ಹಾಗೂ 5 ನೇ ವಾರ್ಡಿನಲ್ಲಿ ಹಮ್ಮಿ ಕೊಂಡಿರುವ ಸಭೆಯಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಬಲಿಷ್ಠ ಮಾಡಲು ಈ ಸದಸತ್ವ ಅಭಿಯಾನ ಮಾಡಲು ಕಾರ್ಯಕರ್ತರಿಗೆ ಕರೆ ನೀಡಲಾಗಿದೆ.

ಈ ಸಂದರ್ಭದಲ್ಲಿ ತಾಲ್ಲೂಕು ಮಂಡಲದ ಬಿಜೆಪಿ ಅಧ್ಯಕ್ಷರಾದ, ಸಂತೋಷ ಪಾಟೀಲ ಹಾಗೂ ಬಿಜೆಪಿ ಮುಖಂಡರಾದ, ಗುರು ತಳವಾರ ಪ್ರಶಾಂತ ಕದ್ದರಕಿ ನಿಲ್ಲಮ್ಮ ಯಡ್ರಾಮಿ ಅಲೋಕ ರೋಡಗಿ ಹಾಗೂ ಬಿಜೆಪಿಯ ಮಹಿಳಾ ಕಾರ್ಯಕರ್ತರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಾಗಿ