“ಬದುಕಲಿ ದುಃಖದ ಪಾಠಅನುಭವ ಜಗದ ನಿಜ ಅಮೃತ”…..

ಅಮೃತದಂತೆ ಸವಿ ನುಡಿ
ಕೋಪ ನಿಜ ಶತ್ರು
ತಾಪ ನಿಜ ಬಡತನ
ಕರುಣೆಯೇ ರಕ್ಷಣೆ
ಮನವೇ ಮಂದಾರ
ಹೃದಯವೇ ಅರಮನೆ
ದ್ವೇಷವೇ ದೇಹದ ಕಂದಕ
ಸಹನವೇ ಆದರ್ಶ
ವಿರಸವೇ ವಿಷ
ಮೌನವೇ ಬಂಗಾರ
ಧ್ವನಿ ಮಧುರತೆ ಚೆನ್ನ
ಸುಮಾರ್ಗ ಉತ್ತಮ
ಕಳಂಕ ಕಪ್ಪು ಮಸಿ
ಕನಸು ಗಗನ ಕುಸುಮ
ಜ್ಞಾನ ಸಂಪಾದಿಸು
ಬೆಳಕಿನಲಿ ನಲಿವಿರಲಿ
ತಪ್ಪು ಕಾಣದಿರಲಿ
ಸತ್ಯ ಮರೆಮಾಚಬೇಡ
ಪ್ರಶ್ನೆ ಕೇಳುವ ರೂಢಿ ಚೆನ್ನ
ಸಾಧನೆಗೆ ಪ್ರಯತ್ನ ಮಾಡಿ
ನಿನ್ನದಿದ್ದರೆ ದಾನ ಮಾಡು
ಬಯಸದೆ ಬಂದುದು ಖುಷಿ
ಬಯಸಿ ಬಾರದ್ದು ಕನಿಷ್ಠ
ಅತೀಯವಾದದ್ದು ಹುಚ್ಚತನ
ಜನ್ಮದಾತರಿಗೆ ಏರು ಧ್ವನಿ ಬೇಡ
ಮಾತುಕಲಿಸಿದವರ ಮುಂದೆ
ಮಾತನಾಡುವದು ಬಿಡಬೇಡ
ಬೇರೆಯವರಿಗಿಂತ ಬಿನ್ನಹ
ನೀನೇ ಹೆಚ್ಚು ಅಪಾಯಕಾರಿ
ಶುಭ ನುಡಿ ಅಮೃತದ ಸವಿ
ಹಿರಿಯ ಚೇತನಗಳ ಸಲಹೆ ಪಡಿ
ದಾರಿಯಲಿ ಮುಳ್ಳಿದ್ದರೆ ತಗೆ
ಬದುಕಲಿ ದುಃಖ ಪಾಠ ಕಲಿಸುತ್ತೆ
ಹಸಿವು ಊಟ ರುಚಿಸುತ್ತೆ
ಇಲ್ಲದ್ದು ಬದಕು ಬದಲಿಸುತ್ತೆ
ಅನವಶ್ಯಕ ಸಿರಿ ಇದ್ದಾಗ ನಿರ್ಲಕ್ಷ
ಅವಶ್ಯಕತೆಗೆ ತನು ಮನ ಭಾಗುತ್ತೆ
ಬದುಕಲಿ ದುಃಖದ ಪಾಠ
ಅನುಭವ ಜಗದ ನಿಜ ಅಮೃತ”
ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಮಾನವ ಜೀವ ರಕ್ಷಕ”
ಐಕಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.
ಬಾಗಲಕೋಟೆ.