ಗಣಿತ ಕಲಿಕಾ ಆಂದೋಲನ ಸ್ಪರ್ಧೆ – ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ.
ಹುನಗುಂದ ನವೆಂಬರ್.18

ಮಕ್ಕಳು ಈ ದೇಶದ ಸಂಪತ್ತು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾಗೂರ ಸಿಆರ್‌ಪಿ ಸಂಗಣ್ಣ ಚಲವಾದಿ ಹೇಳಿದರು.ಹುನಗುಂದ ಸಮೀಪದ ನಾಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮುದಾಯ ಹಾಗೂ ಅಕ್ಷರ ಫೌಂಡೇಷನ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನಿತ್ಯ ಜೀವನ ಆರಂಭವಾಗುವುದೇ ಲೆಕ್ಕಾಚಾರದ ಮೂಲಕ ಗಣಿತ ಕಬ್ಬಿಣದ ಕಡಲೆಯಾಗಿದೆ ಎಂದು ಮಕ್ಕಳು ಭಯಪಟ್ಟು ಅದರಲ್ಲಿ ಆಸಕ್ತಿ ತೋರದೇ ಹಿಂದುಳಿಯುತ್ತಿದ್ದಾರೆ.ಇದನ್ನು ಹೋಗಲಾಡಿಸುವ ಉದ್ದೇಶದಿಂದ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹಾಗೂ ಗಣಿತ ವಿಷಯವನ್ನು ಸರಳೀಕರಣ ಗೊಳಿಸುವ ಸಲುವಾಗಿ ಗ್ರಾ.ಪಂ ಮಟ್ಟದ ಗಣಿತ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ.ಗಣಿತ ಕ್ಲಿಷ್ಟಕರ ವಿಷಯವಲ್ಲ ಇಷ್ಟಪಟ್ಟು ವಿಷಯವನ್ನು ಅರ್ಥೈಸಿಕೊಂಡು ಆಡುತ್ತಾ ಕಲಿಯಬಹುದಾಗಿದೆ ಎಂದರು.ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಗಂಗವ್ವ ನಾಗೂರ ಅವರು ಉದ್ಘಾಟಿಸಿದರು.ನಾಗೂರ,ಇಲ್ಯಾಳ,ಯಡಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ೪,೫,೬ ನೆಯ ತರಗತಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು.ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹಮಾನ ವಿತರಣೆ ಮಾಡಲಾಯಿತು.ಗ್ರಾ.ಪಂ ಉಪಾಧ್ಯಕ್ಷ ಮಹಾಂತೇಶ ಮುರಡಿ,ಸದಸ್ಯರಾದ ನಿಂಗನಗೌಡ ಪರತಗೌಡರ,ಬಸಪ್ಪ ಬೀಳಗಿ,ಶಾರದಾ ಪಾಟೀಲ,ಹುಲಿಗೆವ್ವ ಮಾದರ,ಅಜ್ಜಪ್ಪ ನರಗುಂದ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಕುಂಬಾರ,ಮುಖ್ಯೋಪಾಧ್ಯಾಯರಾದ ಮಹಾಂತೇಶ ಮುರಡಿ,ರವಿ ತಾವರಗೇರಿಮಠ,ಬಸವರಾಜ ಭಜಂತ್ರಿ, ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಅಂದಾನಗೌಡ ಗೌಡರ,ಗಂಗಮ್ಮ ಹುಚನೂರ,ಮುತ್ತಪ್ಪ ಬಳಿಗಾರ ಹಾಗೂ ಗ್ರಾಮ ಪಂಚಾಯತಿ ಮತ್ತು ಶಾಲಾ ಸಿಬ್ಬಂದಿ ವರ್ಗ ಇದ್ದರು.ಶಿವಲಿಂಗಪ್ಪ ಗುಣಿಕಿ ನಿರೂಪಿಸಿದರು,ನೀಲೋಪರ್ ಸಂದಿಮನಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ