ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಬೆಂಕಿ ಅವಘಡ….!
ಕೊಡಗು,ಗೋಣಿಕೊಪ್ಪಲು (ಜನವರಿ 10):
ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಬೆಂಕಿ ಅವಘಡ
ಗೋಣಿಕೊಪ್ಪಲದ ಮುಖ್ಯ ರಸ್ತೆಯಲ್ಲಿ ಬರುವ ಬೈರು ಪೈಂಟ್ಸ್ ಎಂಬ ಅಂಗಡಿಗೆ ಬೆಳ್ಳಂ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಯಿಂದಾಗಿ ಇಡೀ ಕಟ್ಟದಲ್ಲಿ ಬೆಂಕಿ ಆವರಿಸಿಕೊಂಡು ದಟ್ಟ ಹೊಗೆ ಮೂಡಿದ್ದು ಕಟ್ಟಡ ಸುಟ್ಟುಹೋಗಿದೆ.ಸದ್ಯ ಯಾವುದೆ ಪ್ರಾಣ ಹಾನಿ ಆಗಿಲ್ಲ .
ನಂತರ ಅಲ್ಲಿನ ಜನ ಸಾಮಾನ್ಯರ ಸಮಯ ಪ್ರಜ್ಞೆ ಮೆರೆದು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ , ಏಳು ಗಂಟೆಯ ಸಮಯಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಎಲೆಕ್ಟ್ರಿಕ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಜನರು ಹೇಳುತ್ತಿದ್ದಾರೆ, ಅಂಗಡಿ ಒಳಗೆ ಭಾರಿ ಪ್ರಮಾಣದ ಪೇಂಟಿಂಗ್ ಗಳು ಇದ್ದು ಇವೆಲ್ಲವೂ ಕೂಡ ಈಗ ಬೆಂಕಿಗೆ ಆಹುತಿಯಾಗಿವೆ .