ಜೈ ಭುವನೇಶ್ವರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ದಿಂದ ಭುವನೇಶ್ವರಿ ತಾಯಿಗೆ ವಿಶೇಷ ಪೂಜೆ.
ತರೀಕೆರೆ ಸ.23

ಚಿಕ್ಕ ಮಗಳೂರು ಕರ್ನಾಟಕ 50 ರ ಸಂಭ್ರಮದ ಅಂಗವಾಗಿ ಕನ್ನಡ ಜೋತಿ ರಥವನ್ನು ನಗರಕ್ಕೆ ತಾಲೂಕ ಆಡಳಿತ ವತಿಯಿಂದ ಕ್ಷೇತ್ರದ ಶಾಸಕರಾದ ಜಿ.ಹೆಚ್ ಶ್ರೀನಿವಾಸ ಉಪ ವಿಭಾಗಾಧಿಕಾರಿಗಳಾದ ಡಾಕ್ಟರ್ ಕಾಂತರಾಜ್ ರವರ ನೇತೃತ್ವದ ಹಾಗೂ ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರುಗಳು ಒಳಗೊಂಡು ಅದ್ದೂರಿಯಾಗಿ ನಗರ ದಕೊಡಿ ಕ್ಯಾಂಪು ವೃತ್ತಕ್ಕೆ ಬರ ಮಾಡಿಕೊಂಡು ತಾಲೂಕ ಆಡಳಿತದಿಂದ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಡೊಳ್ಳು ವೀರಗಾಸೆ ಕುಂಭ ಕಳಸ ದೊಂದಿಗೆ ಬಿಎಚ್ ರಸ್ತೆ ಮುಖಾಂತರ ಮೆರವಣಿಗೆ ಸಾಗಿತು ಇದೇ ಸಂದರ್ಭದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ತಾಯಿ ಭುವನೇಶ್ವರಿ ದೇವಿಗೆ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರಸಭೆ ಮುಖ್ಯ ಅಧಿಕಾರಿ ಹಾಗೂ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿ ನಿಧಿಗಳು ಸಂಘ ಸಂಸ್ಥೆ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರು