ಕಲಾ ಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ವತಿಯಿಂದ ನಾಲ್ಕನೇ ವರ್ಷದ ಸಾಂಸ್ಕೃತಿಕ ಕಲೋತ್ಸವ.
ಹಿರೇ ಹೆಗ್ಡಾಳ್ ಆ.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಕಲಾ ಭಾರತಿ ಕಲಾ ಸಂಘ (ರಿ) ಸಂಸ್ಥಾಪಕರು ಕಾರ್ಯಕ್ರಮದ ಆಯೋಜಕರು ಬಣಕಾರ್ ಮೂಗಪ್ಪ ಹಿರೆ ಹೆಗ್ಡಾಳ್ ಇವರ ವತಿಯಿಂದ ನಾಲ್ಕನೇ ಸಾಂಸ್ಕೃತಿಕ ಕಲೋತ್ಸವ ಕಾರ್ಯಕ್ರಮ ಜರುಗಲಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 25.08.2024ರ ಭಾನುವಾರ ಬೆಳಿಗ್ಗೆ 9:30ಕ್ಕೆ ಬಳ್ಳಾರಿ ಜಿಲ್ಲಾ ಸಂಡೂರು ಪಟ್ಟಣದ ಗುರು ಭವನದಲ್ಲಿ ಹೊಸಪೇಟೆ ರಸ್ತೆ ಸಂಡೂರು ಕಾರ್ಯಕ್ರಮ ಜರುಗಲಿದ್ದು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಡಾ, ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲ ಜ್ಞಾನ ಶಿವಯೋಗಿ ಶರಣಬಸವ ಮಹಾ ಸ್ವಾಮಿಗಳು ತಳ್ಳಿಯಾಳ ಸಂಸ್ಥಾನ ಕೋಡಿಮಠ ಗಜೇಂದ್ರಗಡ ಹಾಗೂ ಪೂಜ್ಯ ಶ್ರೀ ಮ ನಿ ಪ್ರಭು ಮಹಾ ಸ್ವಾಮಿಗಳು ಸಂಸ್ಥಾನ ವಿರಕ್ತಮಠ ಸಂಡೂರು ಅಧ್ಯಕ್ಷತೆ ಮಂಜುನಾಥ ಹಿರೇಮಠ ಅಧ್ಯಕ್ಷರು ವೀರಶೈವ ಮಹಾಸಭಾ ಅಧ್ಯಕ್ಷರು ತಾಲೂಕಾ ಘಟಕ ಸಂಡೂರು ಹಾಗೂ ಉಪನ್ಯಾಸಕರಾಗಿ ಶ್ರೀ ವಿವೇಕಾನಂದ ಸ್ವಾಮಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರು ಕೂಡ್ಲಿಗಿ ಈ ಕಾರ್ಯಕ್ರಮ ಸರ್ವ ಧರ್ಮಿಯ ಕಾರ್ಯಕ್ರಮವಾಗಿದ್ದು.

ಎಂದು ಸಂಘದ ಅಧ್ಯಕ್ಷರಾದ ಬಣಕಾರ್ ಮೂಗಪ್ಪ ಇವರು ಮಾತನಾಡಿದರು ಕರ್ನಾಟಕದ ನಾಡಿನ ಹರಾಗುರು ಶರಣರ ಆಶೀರ್ವಾದ ದೊಂದಿಗೆ ಈ ಕಾರ್ಯಕ್ರಮ ಜರುಗಲಿದ್ದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 110 ಸಾಧಕರಿಗೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಕೊಟ್ಟೂರಿನಲ್ಲಿ ಉದ್ಘಾಟನೆ ಗೊಂಡ ಕಾರ್ಯಕ್ರಮ ಈಗ ಸಂಡೂರಿನ ವರೆಗೂ ಈ ಒಂದು ಸಂಘ ನಾಲ್ಕನೇ ವರ್ಷದ ಸಂಸ್ಕೃತಿಕ ಕಲೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೋ ದಾ ವಿರೂಪಾಕ್ಷ ಗೌಡ್ರು ಉಮಾ ಮಹೇಶ್ವರ ವಿ ಟಿ ಪ್ರಕಾಶ್ ಶಿವಪ್ರಕಾಶ್ ಯಶ್ವಂತ್ ನಗರ ಮಂಜುನಾಥ ಕೆಎಂ ಪ್ರಕಾಶ್ ಶರಣಯ್ಯ ಲಕ್ಷ್ಮೀಪುರ ಜಿ ಬೋರಣ್ಣ ಕೂಡ್ಲಿಗಿ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ