ಸುಚಿತ್ ಮಿಲೆನಿಯಸ್ ಕಂಪನಿಯಿಂದ ಸರ್ಕಾರದ ನಿಯಮ ಉಲ್ಲಂಘಿಸಿ – ಖನಿಜ ಸಂಪತ್ತು ಲೂಟಿ.
ಮಾನ್ವಿ ಸ.26

ಗಣಿ ಇಲಾಖೆ ಕಾಯಿದೆ 3. ಎ ಪ್ರಕಾರ ಭೂಮಿ ಸಮತಟ್ಟು ಮಾಡುತ್ತೇವೆಂದು ಸರಕಾರಕ್ಕೆ ಮೋಸ ಮಾಡಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಸೀಮೆದ ಸರ್ವೆ ನಂಬರ್ 55/1 ಹಾಗೂ 56 ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮಾನ್ವಿಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 23 ಕಾಮಗಾರಿಗೆ ಸುಚಿತ್ ಮಿಲೆನಿಯಸ್ ಕಂಪನಿ ಅವರು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿದ್ದಲ್ಲದೆ ಸರಕಾರಕ್ಕೆ ರಾಯಲ್ಟಿ ಕಟ್ಟದೆ ಮೋಸ ಮಾಡಿರುವ ಅಂಶ ಇದ್ದರು.

ಸಹ ಗಣಿ ಅಧಿಕಾರಿ ಪುಷ್ಪಲತಾ ಯಾವುದೇ ಕ್ರಮ ಜರುಗಿದೆ ಮೌನ ತಾಳಿದ್ದಾರೆಂದು ಗುರುರಾಜ ನಾಗಲಾಪುರ ಆರೋಪಿಸಿದ್ದಾರೆ.ಗಣಿ ಅಧಿಕಾರಿ ಪುಷ್ಪಲತಾ ಅವರೇ ನೀವು ಸರಕಾರದ ಅಧಿಕಾರಿಯಾಗಿದ್ದರು. ಸಹ ಸರಕಾರಕ್ಕೆ ರಾಜ್ಯ ಹೆದ್ದಾರಿ ಕಾಮಗಾರಿಯವರು ಮೋಸ ಮಾಡಿದರು. ಯಾಕೆ ಮೌನ ತಾಳಿದ್ದೀರಾ ಎಂಬುದು ಸಾರ್ವಜನಿಕರ ವಲಯಗಳಲ್ಲಿ ಬಲವಾಗಿ ಕೇಳಿ ಬರುತ್ತಿರುವ ಆರೋಪವಾಗಿದೆ. ಎಚ್ಚೆತ್ತು ಕೊಂಡರೆ ಸರಿ ಇಲ್ಲವಾದರೆ ನಮ್ಮ ಆಮ್ಮ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿ ಕೊಂಡು ಬೀದಿಗೆ ಇಳಿಯುವ ಕಾಲ ಸನ್ನಿಹಿತವಾದೀತು ಬಲು ಎಚ್ಚರ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ