ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಹಗಲಿನಲ್ಲೂ ಬೆಳಗುತ್ತಿರುವ ಬೀದಿ ದೀಪ, ಗ್ರಾಂ.ಪ ಅಧಿಕಾರಿಗಳ ಬೇಜವಾಬ್ದಾರಿತನ.
ಮಾರ್ಕಬ್ಬಿನಹಳ್ಳಿ ಮಾರ್ಚ್.27

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಳ್ಳಿ ಗ್ರಾಮ ಪಂಚಾಯಿತಿಯ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಅನೇಕ ತಿಂಗಳಗಳಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ಬೀದಿ ದೀಪಗಳು ಉರಿಯುತ್ತಿದ್ದು.ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ.ವಿದ್ಯುತ್ ಪೋಲಾಗುವುದನ್ನು ತಡೆಯಲು ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತಿದ್ದರು. ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅದು ಯಾವದು ಇಲ್ಲಿ ಲೆಕ್ಕಕ್ಕೆ ಇಲ್ಲ ಎನಿಸುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಗಲು-ರಾತ್ರಿ 24/7 ಉರಿಯುತ್ತಿರುವ ಬೀದಿ ದೀಪಗಳು ಪ್ರತಿ ತಿಂಗಳು ಸಾವಿರಾರು ರೂಪಾಯಿ ತೆರಿಗೆ ಹಣ ಪೋಲು, ಹಗಲಿನಲ್ಲಿಯೂ ದೀಪಗಳು ಉರಿದು ವಿದ್ಯುತ್ ಪೋಲಾಗುತ್ತಿದೆ.

ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯುತ್ ಬಿಲ್ ಸುಮಾರು 30 ಸಾವಿರ ರೂಪಾಯಿ ಕಟ್ಟಲಾಗುತ್ತಿದೆ. ಈ ಹಣ ಸಾರ್ವಜನಿಕರ ತೆರಿಗೆ ಹಣ ವಾಗಿದ್ದು. ಉಳಿತಾಯ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.ಹಗಲಿನಲ್ಲಿ ಉರಿಯುವ ಬೀದಿ ದೀಪಗಳನ್ನು ಬಂದ ಮಾಡಲು ಸ್ವಿಚ್ಚ ಬೋರ್ಡುಗಳು ಅಳವಡಿಕೆ ಮಾಡಬೇಕು. ವಿದ್ಯುತ್ ಪೋಲಾಗುವುದನ್ನು ತಡೆಯುವ ಕನಿಷ್ಠ ಕಾಳಜಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇಲ್ಲವೇ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.ಈಗಲಾದರೂ ಎಚ್ಚೆತ್ತುಕೊಂಡು ಬೀದಿ ದೀಪಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು,ಸಾರ್ವಜನಿಕರ ತೆರಿಗೆ ಹಣ ಇದು ನಮ್ಮ ಹಣ ಎಂದು ಅಧಿಕಾರಿಗಳು ತಿಳಿದುಕೊಂಡು ಗ್ರಾಮದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ:ಮಹಾಂತೇಶ.ಹಾದಿಮನಿ. ವಿಜಯಪುರ