ಸಚಿವ ಸ್ಥಾನ ಆಗ್ರಹಿಸಿ ಮುಖಂಡರಿಂದ ಸುದ್ದಿಗೋಷ್ಠಿ.
ಇಂಡಿ ಮೇ.16
ಇಂಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮಂಗಳವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ್ ಮೋಮಿನ್, ಕಾಂಗ್ರೆಸ್ ಮುಖಂಡ ಜಟ್ಟೆಪ್ಪ ರವಳಿ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾಳೆ ಮಾತನಾಡಿ, ಇಂಡಿ ಭಾಗ ನಂಜುಂಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ಭಾಗವಾಗಿದೆ.

ಅಲ್ಲದೆ ಸ್ವಾತಂತ್ರ ನಂತರ ಇಲ್ಲಿಯವರೆಗೂ ಇಂಡಿ ಕ್ಷೇತ್ರಕ್ಕೆ ಯಾರಿಗೂ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕು. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕರು ಕೈಜೋಡಿಸಬೇಕು ಜಿಲ್ಲೆಯ ಎಲ್ಲಾ ಶಾಸಕರು ಸಚಿವ ವಂಚಿತ ಪ್ರದೇಶವಾದ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರಥಮ ಹಂತದಲ್ಲೇ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕು. ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಮಾಧ್ಯಮಗಳ ಮೂಲಕ ತಿಳಿಸಿದರು. ಇಲಿಯಾಸ ಬೋರಾಮಣಿ, ಸದಾಶಿವ ಪ್ಯಾಟಿ, ಸುಬಾಸ ಬಾಬರ್, ಅಪ್ಜಲ್ ಹವಾಲ್ದಾರ್, ಪುಂಡಲೀಕ ಹೂಗಾರ, ಯಮನಾಜಿ ಸಾಳುಂಕೆ, ಸತೀಶ ಕುಂಬಾರ, ಶ್ರೀಕಾಂತ ಕೂಡಿಗನೂರ, ಪರಶುರಾಮ ಹತ್ತರಕಿ, ಮಹೇಶ ಹೊನ್ನಬಿಂದಗಿ, ಮಜೀದ್ ಸೌದಾಗರ್, ಗಂಗಪ್ಪ ನಾಟೀಕಾರ, ರವಿಗೌಡ ಬಿರಾದಾರ ಮತ್ತಿತರಿದ್ದರುಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ