ಒಳ ಮೀಸಲಾತಿ ಜಾರಿ ಗೊಳಿಸುವಂತೆ ಗುಡುಗಿದ – ಅನಿಲ್ ಕುಮಾರ್.
ಮಾನ್ವಿ ಅ.03

ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮುದಾಯ ಮೊದಲಿನಿಂದಲೂ ಸಾಥ್ ಕೊಡುತ್ತ ಬಂದಿದೆ, ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಹೋರಾಟಗಾರರ ಪಿ.ಅನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಬಂದ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಯಶಸ್ವಿ ಯಾಗಿದ್ದರಿಂದ ಬಸವ ವೃತ್ತದಲ್ಲಿ ಜಮಾವಣೆ ಗೊಂಡು ಹೋರಾಟದ ಕಿಚ್ಚು ತೋರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ತಾವು ಯಾಕೆ ಸದಾಶಿವ ವರದಿಯನ್ನು ಜಾರಿ ಮಾಡುತ್ತಿಲ್ಲ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲನೆ ಮಾಡುತ್ತಿಲ್ಲ ಎಂದರೆ ಮಾದಿಗರ ಶಕ್ತಿಯನ್ನು ನೋಡುವ ಸಲುವಾಗಿ ಹಿಂದೇಟು ಹಾಕುತ್ತಿದ್ದೀರಾ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಹೋರಾಟಗಾರರು ಕಿಡಿ ಕಾರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ.