ಬಾಗಲಕೋಟೆಯ ಬಿಟಿಡಿಎ ಕರ್ಮಕಾಂಡಕ್ಕೆ ಬೇಸತ್ ಸಾರ್ವಜನಿಕರ ಆಕ್ರೋಶ.
ಬಾಗಲಕೋಟೆ ಜನೇವರಿ.17

ಯುನಿಟ್ 1 ನವನಗರ ಮುಖ್ಯ ನಾಲಾ ಮುಚಖಂಡಿ ಯಿಂದ ಯಮೂನರಪ್ಪ ವರೆಗಿನ ಕಾಮಾಗಾರಿಯ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿ ಆಗಿದೆ. ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು ಸುಮಾರು 68 ಕೋಟಿ ರೂಪಾಯಿಗಳ ಬೃಹತ್ ಕಾಮಾಗಾರಿಯ ಕೆಲಸ ನೀರು ಹರೀತಾ ಇದೆ ಅದರಲ್ಲಿ ಹಾಗೆ ಕ್ರಾಂಕ್ರಿಟ್ ಹಾಕುತಾ ಇರುವರು . ಸಿಮೆಂಟ್ ನ ಶಕ್ತಿ ನಶಿಸಿ ಹೋಗುತ್ತೆ . ಈ ತರ ಹಾಕಿದರೆ ಕಾಂಕ್ರೀಟ್ ಶಕ್ತಿ ಹೇಗೆ ಇರುತ್ತೆ ನೋಡಿ ನಮ್ಮ ಬಿಟಿಡಿಎ ಅಧಿಕಾರಿಗಳ ಬೇಜವಾಬ್ದಾರಿ ಕಾಮಗಾರಿಗೆ ಹಿಡಿದ ಕೈಗನ್ನಡಿ ಯಂತಾಗಿದೆ. ನೀರು ತಗಿದೂ ಮೋಟಾರು ಹಚ್ಚಿ ಆಮೇಲೆ ಕಾಂಕ್ರೀಟ್ ಹಾಕುವ ಕೆಲಸ ಆಗಬೇಕು.

ಕಳಪೆ ಕಾಮಗಾರಿಗೆ ಕಣ್ಣು ಮುಚ್ಚಿ ಕುಳಿತ ಬಿಟಿಡಿಎ ಕಾರ್ಯ ನಿರ್ವಾಹಕ ಇಂಜಿನಿಯರ್ ವಿಭಾಗ 1 . ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು . ಇದರ ಬಗ್ಗೆ ಈ ಹಿಂದೆ ಇದೇ ಸೆಕ್ಟರ್ ನಂಬರ್ 9 ರಲ್ಲಿ ಹಾದು ಹೋಗುವ ನಾಲಾದ ಕಾಮಾಗಾರಿ ಈ ತರಹ ಕಳಪೆ ಗುಣಮಟ್ಟದ ಕಾಮಾಗಾರಿ ಮಾಡಿದರು ಇದರ ಬಗ್ಗೆ ಸಾರ್ವಜನಿಕರು , ಸಾಮಾಜಿಕ ಹೋರಾಟಗಾರರು ದೂರು ನೀಡಿದರು ಗುತ್ತಿಗೆದಾರರ ಮೇಲೆ ಕ್ರಮ ತೆಗೆದು ಕೊಳ್ಳದೇ ಇರುವುದು.ಈಗ ಆಗಿರುವ ಕಳಪೆ ಕಾಮಗಾರಿ ತ್ವರಿತ ಗತಿಯಲ್ಲಿ ಸರಿ ಪಡಿಸಿ. ಇದೆ ಪ್ರವೃತ್ತಿ ಮುಂದುವರಿದಲ್ಲಿ ಬೇಸತ್ ಸಾರ್ವಜನಿಕರ ಕೈಯಲ್ಲಿ ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಯಲ್ಲಿ ಹಿಡಿದು ಜ್ವರ ಬರುವ ತನಕ ಬಡಿಯುವ ಕಾಲ ದೂರವಿಲ್ಲ ಬಲು ಎಚ್ಚರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.