“ಭೂಮಾತೆಯ ಮಡಿಲಲಿ ಸಮಾನ ಸಮಾಧಿ”…..

ಶ್ರಮವಿಲ್ಲದ ಸಿರಿತನದವ ಹೆಂಡ ಕುಡಿದ
ಕೋಡಗದಂತವನು
ಆಸಕ್ತಿ ಇಲ್ಲದವ ಸೋಣಗನಂತವನು
ಅಡಿಗಡಿಗೆ ಅರಿವಿದ್ದವನು ಜಗದ ನಿಜ ಜ್ಞಾನ
ಸಿರಿತನದವನು
ಶ್ರೀಮಂತನ ಮನೆಯಲ್ಲಿ ಆಳಾದವನು ನಿಜ
ಖುಷಿವಂತವನು
ಸ್ಥಿರವಿಲ್ಲದ ಬದುಕಿಗೆ ಶಾಶ್ವತದ
ಮಹತ್ವಕಾಂಕ್ಷಿಗಳ ಬುನಾದಿ ಹಾಕುವನು
ಗಿಡಮರ ಪರಿಸರ ಸೃಷ್ಟಿಯ ಸಿರಿ ಸ್ನೇಹ
ಸಂಗಸುಖಿ
ಮಾಡಿದ ಸಹಾಯ ನಮ್ಮ ಶಕ್ತಿಯಾದರೆ
ದೂರು ದ್ವೇಷ ಕೀಳುತನ ನಮ್ಮ ನಿಶಕ್ತಿಗೆ
ಮೂಲತನ
ಆತ್ಮ ಬಲ ಸುಮನ ಸದಾ ಜೋತೆಗಿರುವ ಸ್ನೇಹ
ಬಲ
ದುರಂಕಾರದ ಮಾತು ನಮ್ಮ ಮಾರಿ
ಬಯಕೆ ಕಿಚ್ಚಿನತರಹ ಬೇಡ ಸರ್ವರು
ಮೆಚ್ಚುವಂತಿರ ಬೇಕು
ವಿರೋಧಿಗಳಿಗೆ ಅಶ್ವಮೇಧದಂತೆ
ತಯಾರಿಯಲ್ಲಿರಬೇಕುನೋವುಂಡಗೆ
ಖುಷಿಯ ಮಾತುಗಳನ್ನಾಡಿ ನಗಿಸುವ
ಮನವಿರಲಿ
ಜಂಬದ ಮಾತಿನಿಂದ ಮನಕಲಕಿ
ನೋಯಿಸದಿರಿ ಗಣ್ಯಮಾನ್ಯನೆನಸಿದರೂ
ಭೂಮಾತೆಯ ಮಡಿಲಲಿ ನಗಣ್ಯ ಸಮಾನ
ಸಮಾಧಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.