“ಬಯಸದೇ ಬಂದ ರಾಜಯೋಗ” ಪೋಸ್ಟರ್ ಬಿಡುಗಡೆ.
ಬೆಂಗಳೂರು ನವೆಂಬರ್.10





ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕರ್ನಾಟಕ ಚಲನ ಚಿತ್ರೋತ್ಸವದಲ್ಲಿ ಅಭಿ ಕ್ರಿಯೇಷನ್ಸ್ ಗದಗ ಅವರ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಪೋಸ್ಟರ್ ಹಾಗೂ ‘ರಾಜಯೋಗ ಬಂದಿದೆ ನನ್ನ ನಿನ್ನ ಪ್ರೀತಿಗೆ’ ಹಾಡು ಬಿಡುಗಡೆ ಮಾಡಲಾಯಿತು . ಚಂದ್ರಶೇಖರ ಮಾಡಲಗೇರಿ ಸಾರಥ್ಯದಲ್ಲಿ ಜರುಗಿದ ರಾಜರತ್ನ ಪ್ರಶಸ್ತಿ, ಪುನೀತ ಪ್ರಶಸ್ತಿ ಸಮಾರಂಭದಲ್ಲಿ ಉದ್ಘಾಟನೆಯನ್ನು ಹಿರಿಯ ಚಲನ ಚಿತ್ರ ಕಲಾವಿದರಾದ ಡಾ.ಚಿಕ್ಕಹೆಜ್ಜಾಜಿ ಮಹದೇವ್ ನೆರ ವೇರಿಸಿದರು. ನಂತರ ನಡೆದ ‘ಬಯಸದೇ ಬಂದ ರಾಜಯೋಗ’ ಪೋಸ್ಟರ್ ಹಾಗೂ ಹಾಡನ್ನು ರಂಗಭೂಮಿ, ಕಿರುತೆರೆ ಮತ್ತು ಚಲನ ಚಿತ್ರ ಜನಪ್ರಿಯ ಕಲಾವಿದರಾದ ಗಣೇಶರಾವ್ ಕೇಸರಕರ ಬಿಡುಗಡೆ ಮಾಡಿ ಅರವಿಂದ ಮುಳಗುಂದ ನಿರ್ದೇಶನದ ಈ ಕಿರು ಚಿತ್ರದ ಹಾಡು ಪ್ರಭು ಗಂಜಿಹಾಳ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಯಾಗುತ್ತಿದ್ದು ತುಂಬ ಸೊಗಸಾಗಿದೆ ಎಲ್ಲರೂ ನೋಡಿ , ಪ್ರೋತ್ಸಾಹಿಸಿ ಎಂದರು, ಬಹುಭಾಷಾ ಚಲನ ಚಿತ್ರ ನಿರ್ದೇಶಕ ರಾಜೀವಕೃಷ್ಣ ಗಾಂಧಿ, ಚಲನ ಚಿತ್ರ , ಕಿರುತೆರೆ ನಟಿ ಮತ್ತು ನಿರ್ಮಾಪಕಿ ಸುನಂದಾ ಕಲಬುರ್ಗಿ, ಗೀತ ರಚನೆಕಾರ, ಸಹ ನಿರ್ದೇಶಕ ಮನ್ವರ್ಷಿ ನವಲಗುಂದ, ನಿರ್ಮಾಪಕ ನಟ ಲೋಕೇಶ ವಿ ,ಸಿನಿಮಾ ಪತ್ರಕರ್ತ ಶರಣು ಹುಲ್ಲೂರ, ನಾಯಕ ನಟ ಡಾ.ಕಿರಣಚಂದ್ರ , ಕಲಾವಿದ ಸಿದ್ದುಕೃಷ್ಣ ಢೇಕಣಿ , ನಿರ್ಮಾಪಕ ಎ.ಚಂದ್ರಶೇಖರ, ಸಹ ನಿರ್ದೇಶಕ ಡಾ.ಪ್ರಭು ಗಂಜಿಹಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರು ಚಿತ್ರದಲ್ಲಿ ನಾಯಕ ನಟರಾಗಿ ಯುವವೈದ್ಯ ಡಾ.ಕಿರಣಚಂದ್ರ, ನಾಯಕಿಯರಾಗಿ ಅಪೂರ್ವ ಭರಣಿ , ಅಮೃತಾ , ಅಪೂರ್ಣ , ಸಿದ್ದುಕೃಷ್ಣ ಢೇಕಣೆ, ಎ.ಚಂದ್ರಶೇಖರ, ಕಿಶನ್ರಾವ್ ಕುಲಕರ್ಣಿ , ಡಾ.ಕಲ್ಮೇಶ್ ಹಾವೇರಿಪೇಟ್ , ಎನ್ ಎಸ್ ಪಾಟೀಲ್ (ಹೂಲಿ), ರಾಜೇಶ್ವರಿ, ಕೀರ್ತಿ ಅರವಿಂದ್, ಲಕ್ಷ್ಮೀ ಎಸ್.ಬಿ, ರಶ್ಮಿ ಮಾಲಸೊರೆ, ಶಂಭು ಪಾಟೀಲ್, ಗಣೇಶ್ ಜಾಧವ್, ಶ್ರೇಯಸ್ ಶಿಂಧೆ, ರಾಜೇಶ್ವರಿ ಹಂಜಿ, ಅಂಕಿತ ಕುಲಕರ್ಣಿ, ಆನಂದ ಜೋಶಿ, ರಾಮು ಕಲಾದಗಿ, ಆರ್.ಜೆ.ರಾಘವೇಂದ್ರ, ವೀರಣ್ಣ ವಿಠಲಾಪೂರ , ಪ್ರಭು ಹಂಚಿನಾಳ, ರಾಹುಲ್ ದತ್ತಪ್ರಸಾದ, ರಾಜೀವ್ ಸಿಂಗ್ ಹಲವಾಯಿ, ಮೊದಲಾದವರು ಅಭಿನಯಿಸಿದ್ದಾರೆ. ದಯಾನಂದ.ಜಿ , ಪ್ರಶಾಂತ್, ರಾಜೇಶ್ ಛಾಯಾಗ್ರಹಣ, ಕಥೆ, ಸಂಭಾಷಣೆ ಮಧು ಜೋಶಿ, ಸಾಹಿತ್ಯ ಪ್ರಮೋದ್ ಜೋಶಿ, ಪ್ರಸಾಧನ ದೇವೇಂದ್ರ ಕಮ್ಮಾರ, ಸಾಹಸ – ಸ್ಟೈಲ್ ಚಂದ್ರು, ಸಂಗೀತ ಮಲ್ಲು ಸಂಶಿ , ಹಿನ್ನಲೆಗಾಯನ ವನಿತಾ ಪರಮೇಶ್ವರ, ಸಂಕಲನ ಸಿದ್ದಾರ್ಥ್ ಜಾಲಿಹಾಳ ಎಸ್.ಎನ್.ಜಾಲ್ಸ್ ಸ್ಟುಡಿಯೋ, ಪತ್ರಿಕಾ ಸಂಪರ್ಕ ಡಾ.ವೀರೇಶ ಹಂಡಿಗಿ, ಪ್ರಚಾರಕಲೆ ಅವಿನಾಶ್ ಗಂಜಿಹಾಳ, ವಿಶ್ವಪ್ರಕಾಶ ಮಲಗೊಂಡ , ಸಹಕಾರ ಮಹಾಂತೇಶ ಹಳ್ಳೂರ, ಸಹ ನಿರ್ದೇಶನ ಡಾ.ಪ್ರಭು ಗಂಜಿಹಾಳ, ನೃತ್ಯ ಮತ್ತು ಸಹಾಯಕ ನಿರ್ದೇಶನ ಸುಭಾಷ್ ಹವಾಲ್ದಾರ್, ನಿರ್ವಹಣೆ ರಘು ತುಮಕೂರು, ಆನಂದ್ ಜೋಶಿ, ಚಿತ್ರಕಥೆ ನಿರ್ದೇಶನ ‘ಮಹಾಮಹಿಮ ಲಡ್ಡುಮುತ್ಯಾ’ ಚಲನಚಿತ್ರ ಖ್ಯಾತಿಯ ಅರವಿಂದ್ ಮುಳಗುಂದ ಅವರದಿದೆ. ಶ್ರೀಮತಿ ಸಂಗೀತಾ ಚಂದ್ರಶೇಖರ್, ಶ್ರೀಮತಿ ವಿದ್ಯಾ ಗಂಜಿಹಾಳ, ಶ್ರೀಮತಿ ರೇಖಾ ಸಿದ್ದುಕೃಷ್ಣ ಕಿರುಚಿತ್ರದ ನಿರ್ಮಾಪಕರಾಗಿದ್ದಾರೆ. ಸಧ್ಯದಲ್ಲೇ ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ಚಂದ್ರಶೇಖರ ತಿಳಿಸಿದರು.
*****
ವರದಿ
ಡಾ.ಪ್ರಭು ಗಂಜಿಹಾಳ
ಮೊ-9448775346