ಹಬ್ಬದ ಖುಷಿ ಕಸಿದ ಮಳೆರಾಯ.
ಗೊರಬಾಳ ಅ.12

ಇಳಕಲ್ಲ ತಾಲೂಕಿನ ಗೊರಬಾಳ ಗ್ರಾಮದ ಅಂಕಲಿಮಠ ರಸ್ತೆಯ ನಿವಾಸಿಗಳು ಬೆಳಿಗ್ಗೆ ಎದ್ದು ಮನೆಯ ಬಾಗಿಲು ತೆರೆದರೆ ಮನೆಯ ಮುಂದೆ ಕೆರೆಯ ನಿರ್ಮಾಣವಾದಂತೆ ಸುಮಾರು ಎರಡು ಅಡಿಯಷ್ಟು ನೀರು, ಮನೆಯ ಮುಂದೆ ನಿಂತು ಥೇಟ್ ಕೆರೆಯಂತಾಗಿದೆ ಇಲ್ಲಿನ ನಿವಾಸಿಗಳು ಈಗಾಗಲೇ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರು ನಿಲ್ಲುವ ಮಳೆಯ ನೀರನ್ನು ಸಾಗಿಸುವ ಪ್ರಯತ್ನ ಗ್ರಾಮ ಪಂಚಾಯಿತಿ ಸಿಬ್ಬಂದಿಯವರಾಗಲಿ ಹಾಗೂ ಇಲ್ಲಿನ ಜನ ಪ್ರತಿನಿಧಿಗಳಾಗಲಿ ಮಾಡುವ ಸಾಹಸಕ್ಕೆ ಕೈ ಹಾಕಲೇ ಇಲ್ಲ ಮಳೆ ಬಂದಾಗಲೆಲ್ಲ ಮನೆಯಿಂದ ಹೊರಗೆ ಬರುವುದು ಕಷ್ಟ ಆಗುತ್ತಿದ್ದು ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲ ದಂತಾಗಿದೆ.

ಇಂದಿನ ಮುಂದುವರಿದ ಆಧುನಿಕ ಜಗತ್ತಿನಲ್ಲಿಯೂ ಇಳಕಲ್ಲ ತಾಲೂಕಿಗೆ ಅಂಟಿಕೊಂಡಿರುವ ಗೊರಬಾಳ ಗ್ರಾಮದಲ್ಲಿಯೇ ಈ ಪರಿಸ್ಥಿತಿಯಾದರೆ ದೂರದ ಹಳ್ಳಿಗಳ ಪರಿಸ್ಥಿತಿ ಹೇಗಿರಬೇಡ ಎನ್ನುವುದು ವಿಚಾರ ಮಾಡುವಂತಾಗಿದೆ ಇಲ್ಲಿನ ನಿವಾಸಿಗಳು ಮಳೆ ಬಂದಾಗಲೆಲ್ಲ ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೇ ಕುಳಿತು ಕೊಳ್ಳುವಂತ ಪರಿಸ್ಥಿತಿ ನಿರ್ಮಾಣ ವಾಗುತ್ತಿದ್ದು ಯಾಕಾದ್ರೂ ನಾವು ಇಲ್ಲಿ ಮನೆ ನಿರ್ಮಾಣ ಮಾಡಿಕೊಂಡೆವು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆದರೆ ಇದರಿಂದ ಈಗಾಗಲೇ ಹಲವು ಬಾರಿ ಜನ ಪ್ರತಿನಿಧಿಗಳಿಗೆ ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಬಂದಿದ್ದರು ಯಾವುದೇ ಪ್ರಯೋಜನ ಆಗುತ್ತಿಲ್ಲ ಹೀಗಾಗಿ ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಇಲ್ಲಿನ ನಿವಾಸಿಗಳು ಮನೆಯ ಮುಂದಿನ ನೀರು ನೋಡಿ ಹಬ್ಬ ಮಾಡುವುದು ಹೇಗೆ ಎಂದು ಚಿಂತಾಕ್ರಾಂತ ರಾಗಿದ್ದಾರೆ.

ಈಗಲಾದರೂ ಜನ ಪ್ರತಿನಿಧಿಗಳು ಎಚ್ಚೆತ್ತು ಕೊಂಡು ಇಲ್ಲಿನ ನೀರು ಸಾಗಿಸುವ ವ್ಯವಸ್ಥೆ ಮಾಡಿ ಕೊಡಬೇಕೆಂದು ಅಂಕಲಿಮಠದ ರಸ್ತೆಯ ನಿವಾಸಿಗಳು ಮನವಿ ಮಾಡುತ್ತಿದ್ದಾರೆ. ಮುಂದಿನ ತಿಂಗಳ ಅಂಕಲಿಮಠದ ಜಾತ್ರೆ ಎನ್ನು ಅದ್ದೂರಿಯಾಗಿ ಮಾಡಲಾಗುತ್ತಿದ್ದು ರಸ್ತೆಯ ಪರಿಸ್ಥಿತಿ ಹೀಗಾದರೆ ಜಾತ್ರೆಯ ಸಮಯದಲ್ಲಿ ಏನಲ್ಲ ಆಗಲಿದೆ ಎಂದು ಗ್ರಾಮಸ್ಥರು ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಹಾಗಾಗಿ ಬೇಗನೆ ಮಳೆಯ ನೀರಿನಿಂದ ಆಗುತ್ತಿರುವ ಅವಾಂತರವನ್ನು ಆದಷ್ಟು ಬೇಗನೆ ಸರಿಪಡಿಸ ಬೇಕೆಂದು ಸಾರ್ವಜನಿಕರು ಕೂಗು ಹೆಚ್ಚಾಗಿದೆ.