ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು – ನೀರಿನ ಒತ್ತಡಕ್ಕೆ ಗೇಟ್ ಎತ್ತಿದ್ದಾರೆ.
ರಂಗಯ್ಯನದುರ್ಗ ಅ.12
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯತಿಗೆ ಸೇರಿದ ಬೊಮ್ಮಲಿಂಗನಹಳ್ಳಿ ರಂಗಯ್ಯನದುರ್ಗ ಜಲಾಶಯವಿದ್ದು. ಈ ಜಲಾಶಯಕ್ಕೆ ನದಿಯಂತಾದ ಚಿನ್ನದ ಹಗರಿ ಈ ಜಲಾಶಯಕ್ಕೆ ಮೈದುಂಬಿ ಹರಿದು ಬರುತ್ತದೆ ಮತ್ತು ಗಂಡ ಬೊಮ್ಮನಹಳ್ಳಿ ಕೆರೆ ಕೂಡಿ ನೀರು ಸಹ ಈ ಜಲಾಶಯಕ್ಕೆ ಬರುತ್ತವೆ. ಈ ಚಿನ್ನದ ಹಗರಿ ನೀರು ಚಿತ್ರದುರ್ಗ ದಾವಣಗೆರೆ ಬಳ್ಳಾರಿ ವಿಜಯನಗರ ಮತ್ತು ಇಷ್ಟು ಪ್ರದೇಶಗಳಿಂದ ಅರಿದು ಬರುವ ನೀರು ಈ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿ ಗೇಟುಗಳು ಎತ್ತಿದ್ದಾರೆ. ನೀರಿನ ಅಂತರ್ಜಲ 0.5 ಟಿ.ಎಂ.ಸಿ ನೀರು ಹೊಂದಿರುತ್ತದೆ ಸುಮಾರು ಎರಡು ಮೂರು ವರ್ಷಗಳ ವರೆಗೂ ಲಕ್ಷಾನು ಗಟ್ಟಲೆ ಜಮೀನುಗಳಿಗೆ ನೀರು ಶೇಖರಣೆ ಆಗುತ್ತದೆ. ಈ ಚಿನ್ನದ ಹಗರಿ ಚಿತ್ರದುರ್ಗ ಸಂಘನಳ್ಳಿ ಕೆರೆಯಿಂದ ಹುಟ್ಟಿ ಬರುತ್ತದೆ. ಮತ್ತು ದಾವಣಗೆರೆ ಜಿಲ್ಲೆಗೆ ಸಂಬಂಧಪಟ್ಟ ತಾಲೂಕುಗಳು ಜಗಲೂರು ದೋನಹಳ್ಳಿ ಕೂಡ್ಲಿಗಿ ತಾಲೂಕಿನ ಉಡಿಯಂ ತಾಯಕನಹಳ್ಳಿ ಮಾರ್ಗವಾಗಿ ಬಂದು ಮಿನಕಿರೆ ಸಿದ್ದಯ್ಯನ ಕೋಟೆ ಗಡ್ಡದ ಬೋರಿನಟ್ಟಿ ನುಂಕನಹಳ್ಳಿ ಮಾರ್ಗವಾಗಿ ರಂಗೈನದುರ್ಗ ಜಲಾಶಯಕ್ಕೆ ಭರ್ತಿ ಆಗುತ್ತದೆ ಮೈದುಂಬಿ ಹರಿಯುತ್ತಿರುವ ನೀರು ಸೇರುತ್ತದೆ. ಈ ನಾಲ್ಕು ಜಿಲ್ಲೆಯ ಮತ್ತು ಆಂಧ್ರಪ್ರದೇಶಕ್ಕೆ ಸಹ ಇದು ಹರಿಯುತ್ತದೆ. ರೈತರು ಈ ನೀರು ಅರಿಯುತ್ತಿರುವುದನ್ನು ಕಂಡು ಸಂತೋಷ ದಿಂದ ಇನ್ನೂ ಎರಡು ಮೂರು ವರ್ಷ ನಾವು ಚೆನ್ನಾಗಿ ಫಸಲು ತೆಗೆಯುತ್ತೇವೆ. ಎಂದು ರೈತರ ಮುಖದಲ್ಲಿ ಸಂತಸ ತಂದಿದೆ. ಈ ರಂಗಯ್ಯನದುರ್ಗ ಜಲಾಶಯಕ್ಕೆ ಈ ಹಿಂದೆ ಶಾಸಕರಾಗಿರುವ ಎನ್ ವೈ ಗೋಪಾಲಕೃಷ್ಣ ಶಾಸಕರು ರಂಗಯ್ಯನದುರ್ಗ ಜಲಾಶಯಕ್ಕೆ ಅನುದಾನ ಮಂಜೂರು ಮಾಡಿಸಿ ಕೆರೆ ಕಟ್ಟೆ ಏರಿಯನ್ನು ಅಭಿವೃದ್ಧಿ ಮಾಡಿಸಿದ್ದರು. ಈಗ ಅದು ಶಾಶ್ವತವಾಗಿ ಕಾಣುವಂತಾಗಿದೆ. ಮತ್ತು ಈ ರಂಗಯ್ಯನದುರ್ಗ ಜಲಾಶಯದಿಂದ ಮೊಳಕಾಲ್ಮುರು ಪಟ್ಟಣಕ್ಕೆ ಸುಮಾರು 12 ಕಿ.ಮೀ ದೂರದವರೆಗೂ ಪೈಪ್ ಲೈನ್ ಮುಖಾಂತರ ಮೊಳಕಾಲ್ಮುರು ಪಟ್ಟಣಕ್ಕೆ ಫಿಲ್ಟರ್ ಮಾಡಿ ನೀರು ಹರಿಸಿದರು. ಮತ್ತು ಮೊಳಕಾಲ್ಮೂರು ಕ್ಷೇತ್ರದ ಗ್ರಾಮಗಳಿಗೆ ತಳವಾರಳ್ಳಿ ಬಟ್ಟಳ್ಳಿ ಚಿಕೆರಳ್ಳಿ ನಾಗಸಂದ್ರ ರಾಂಪುರ ತುಮಕೂರಲ್ಲಿ ಈ ರಂಗನದುರ್ಗ ಜಲಾಶಯದ ನೀರು ಜೀವನಾಡಿ ಆಗಿರುತ್ತದೆ. ಸುಮಾರು ಈಗ 20 ವರ್ಷ ಆಯ್ತು ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತೆ ಮರಳಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಈಗ ಶಾಸಕರಾಗಿ ಒಂದು ವರ್ಷ ಎರಡು ತಿಂಗಳವಾಯಿತು. ಮೊಳಕಾಲ್ಮೂರು ಕ್ಷೇತ್ರ ಬರಿ ಬೆಂಗಾಡು ಗುಡ್ಡ ಕಲ್ಲುಗಳು ಪ್ರದೇಶ ಆಗಿ ಕಾಣುತ್ತದೆ. ಇದನ್ನು ಏನಾದರೂ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಶಾಸಕರಿಗೆ ಮನ ದಟ್ಟವಾಗಿದೆ.
ಏಕೆಂದರೆ ಮಳೆಯನ್ನೇ ನಂಬಿ ಬಯಲು ಭೂಮಿಯಲ್ಲಿ ಜೀವನ ಮಾಡುತ್ತಿರುವ ರೈತರು 80% % ಇದ್ದಾರೆ. ಅದಕ್ಕೆ ಈಗ ಶಾಸಕರು ಏನಾದರೂ ಮೊಳಕಾಲ್ಮೂರು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಮಾಡಿಸಲು ಶತಾಯಗತಾಯ ಪಣ ತೊಟ್ಟಿದ್ದಾರೆ. ಇದು ರೈತರಿಗೆ ಒಳ್ಳೆಯ ಯೋಜನೆ ಎಂದು ಅವರ ಮನಸ್ಸಲ್ಲಿ ಇರುತ್ತದೆ. ಹಿಂದೆ ಕಾಂಗ್ರೆಸ್ ಸರ್ಕಾರಗಳು ಇದ್ದಾಗ ಮಳೆ ಬಾರದೆ ಇರುವ ಸೂಚನೆ ಕಂಡು ಬರುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದರೆ ಮಳೆಯು ಬರುವುದಿಲ್ಲ ಅಂತ ಜನಗಳು ಮಾತನಾಡುತ್ತಿದ್ದರು ಅದು ಈಗ ನೆನಪಾಗಲು ಕಂಡು ಬರುತ್ತದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ಇದೆ ಸ್ಪಷ್ಟ ಬಹುಮತ 136 ಶಾಸಕರು ಇದ್ದು ಕಾಂಗ್ರೆಸ್ ಸರ್ಕಾರವಿರುತ್ತದೆ. ಇದು ಕಾರಣ ಐದು ಭಾಗ್ಯಗಳನ್ನು ಮಹಿಳೆಯರಿಗೆ ಮಾಡಿರುವುದರಿಂದ ಸರ್ಕಾರಕ್ಕೆ ಒಂದು ಶಕ್ತಿ ಸಿಕ್ಕಂತಾಗಿದೆ ಇದರಲ್ಲಿ ನಂಬರ್ ಒನ್ ಗೃಹಲಕ್ಷ್ಮಿ ಬಡವರ ಮನೆಯ ಆರ್ಥಿಕ ಸಹಾಯಕ್ಕೆ ಕೊಡುತ್ತಿರುವ 2000 ಮತ್ತು ಅಕ್ಕಿ ಬದಲು ದುಡ್ಡು ಮತ್ತು ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ಸಿನಲ್ಲಿ ಫ್ರೀ ಓಡಾಡಲು ಮತ್ತು ಮನೆ ಮನೆಗೆ ವಿದ್ಯುತ್ ಫ್ರೀ ಈ ಭಾಗ್ಯಗಳು ಮತದಾರಿಗೆ ಮುಖ್ಯವಾದವು ಆಗ ಸ್ಪಷ್ಟವಾಗಿ ಕಾಂಗ್ರೆಸ್ ಸರ್ಕಾರ ನಡೆಸುವಂತೆ ಮತದಾರರು ಮತಗಳನ್ನು ಹಸ್ತದ ಗುರುತಿಗೆ ಒತ್ತಿದರು ಆಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವಂತಾಯ್ತು ಬಡ ಜನಗಳ ಕಷ್ಟ ಸಹಾಯಕ್ಕೆ ನಿಂತ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಅದಕ್ಕೆ ಆ ಭಗವಂತನು ಗಂಗೆ ಧರೆಗಿಳಿದು ಭೂಮಿಗೆ ಹರಿದು ಬಂದಳು ಹಳ್ಳ ಸರೋವರಗಳು ಕೆರೆ ಕಟ್ಟೆಗಳು ಚೆಕ್ ಡ್ಯಾಮ್ ಗೋಕಟ್ಟೆ ಇವುಗಳೆಲ್ಲ ತುಂಬಿ ಹರಿಯುತ್ತಿದ್ದವು ಬಡವರ ಸಹಾಯಕ್ಕೆ ನಿಲ್ಲುವ ಸರ್ಕಾರ ಯಾವ ತೊಂದರೆಯೂ ಆಗುವುದಿಲ್ಲ ಅದೇ ರೀತಿಯಾಗಿ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲ್ ಕೃಷ್ಣ ಶಾಸಕರು ಬಡವರ ಆಶಾಕಿರಣ 35 ವರ್ಷದ ರಾಜಕೀಯ ಅನುಭವದಲ್ಲಿ ಎಲ್ಲಾ ಬಡ ವರ್ಗದ ಜನ ಸಾಮಾನ್ಯರಿಗೆ ಸರ್ಕಾರದ ಕೆಲಸಗಳು ಮಾಡಿಸಿರುತ್ತಾರೆ. ಮತ್ತು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇಂಥ ಶಾಸಕರ ಶಕ್ತಿ ಬಹಳ ದೊಡ್ಡದಿರುತ್ತದೆ. ಮತ್ತು ರಸ್ತೆಗಳು ಕುಡಿಯುವ ನೀರಿನ ವ್ಯವಸ್ಥೆ ಚರಂಡಿ ಸಿ.ಸಿ ರೋಡ್ ಗ್ರಾಮಗಳ ವಿದ್ಯುತ್ ದ್ವೀಪ ಹೈ ಮಾಸ್ಕ್ ಲೈಟ್ ಗಳು ಶಿಕ್ಷಣಕ್ಕೆ ಬೇಕಾಗುವ ಶಾಲೆಯ ಕೊಠಡಿಗಳು ಶೌಚಾಲಯ ಕಾಂಪೌಂಡ್ ಅಡಿಗೆ ಕೋಣೆಗಳು ಒಟ್ಟು ಎಲ್ಲಾ ಸರ್ಕಾರದ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ಮಂಜೂರು ಮಾಡಿಸಿ ಜನ ಸಾಮಾನ್ಯರಿಗೆ ಕಲ್ಪಿಸಿ ಕೊಟ್ಟಂತ ಎನ್.ವೈ.ಗೋಪಾಲಕೃಷ್ಣ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು