ತೇರು ಬಯಲು ಸ್ವಚ್ಛತಾ ಕಾರ್ಯ ಕೈಗೊಂಡ – ಪ.ಪಂ ಅಧ್ಯಕ್ಷೆ ರೇಖಾ ರಮೇಶ್.
ಕೊಟ್ಟೂರು ಅ.12

ನಾಡ ದಸರಾ ಹಬ್ಬದ ವಿಶೇಷತೆಯಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಲಕ್ಕಿಯೊಂದಿಗೆ ಮೂಲ ಸ್ಥಾನದಿಂದ ತೇರು ಬಯಲು ರಸ್ತೆಯ ಮಾರ್ಗವಾಗಿ ಹ್ಯಾಳ್ಯಾ ರಸ್ತೆಯಲ್ಲಿ ಇರುವ ಬನ್ನಿ ಮಂಟಪಕ್ಕೆ ಬಂದು ಬನ್ನಿ ಮುಡಿದು ಮತ್ತೆ ಅದೇ ರಸ್ತೆ ಮಾರ್ಗವಾಗಿ ಮೂಲ ಸ್ಥಾನಕ್ಕೆ ಹೋಗುವ ಪದ್ಧತಿ ಇದೆ. ಬನ್ನಿ ಕಟ್ಟೆಯಲ್ಲಿ ಭಕ್ತಾದಿಗಳು ಎಲ್ಲರೂ ಬಂದು ಸ್ವಾಮಿಯ ಆಶೀರ್ವಾದ ಪಡೆದು ಬನ್ನಿ ಮರದಿಂದ ಬನ್ನಿ ತೆಗೆದುಕೊಂಡು ಹೋಗಿ ತಂದೆ ತಾಯಿ – ಗುರು ಹಿರಿಯರಿಂದ ಆಶೀರ್ವಾದ ಪಡೆದು ಗೆಳೆಯ ಗೆಳತಿ ಯೊಂದಿಗೆ ಬನ್ನಿ ಕೊಟ್ಟು ಶುಭಾಶಯ ಕೋರುವ ಧಾರ್ಮಿಕ ಪದ್ಧತಿ ಹೊಂದಿದೆ. ಆದರೆ ಹಬ್ಬದ ದಿನದಂದೇ ಸುರಿದ ಭಾರಿ ಮಳೆಯಿಂದಾಗಿ ತೇರು ಬಯಲು ರಸ್ತೆಯು ಕೆಸರು ಗದ್ದೆಯಿಂದ ಹದಗೆಟ್ಟು ರಸ್ತೆ ಆವರಣ ತುಂಬಾ ಮಳೆ ನೀರು ಆವರಿಸಿ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಅನಾನುಕೂಲ ಉಂಟಾಗುವ ವಾತಾವರಣ ನಿರ್ಮಾಣ ವಾಯಿತು. ಇದನ್ನು ತಕ್ಷಣ ಮನಃಗಂಡ ಪ.ಪಂ.ಅಧ್ಯಕ್ಷೆ. ಬದ್ದಿ ರೇಖಾ ರಮೇಶ್ ರವರ ಸ್ಥಳಕ್ಕೆ ಆಗಮಿಸಿ ಪೌರ ಕಾರ್ಮಿಕ ಸಿಬ್ಬಂದಿ ಬಳಸಿಕೊಂಡು ಮಾರ್ಗದರ್ಶನ ಮಾಡುತ್ತ ತೇರು ಬಯಲು ರಸ್ತೆಯಲ್ಲಿ ನಿಂತ ನೀರನ್ನು ಚರಂಡಿಗೆ ಬಿಡಿಸುವ ಮೂಲಕ ರಸ್ತೆಗೆ ಗ್ರಾವೆಲ್ ಮತ್ತು ಎಂಸ್ಟ್ಯಾಂಡ್ ಸಿಂಪಡಿಸುವ ಮೂಲಕ ಸುಮಾರು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ಮಾಡಿಸುವಲ್ಲಿ ನಿರತರಾಗಿದ್ದರು.

ಇದನ್ನು ವೀಕ್ಷಿಸಿದ ಸಾರ್ವಜನಿಕರು ಮತ್ತು ಬೀದಿ ಬದಿ ವ್ಯಾಪಾರಸ್ಥರು ಇವರ ಈ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತೇರು ಬಯಲು ರಸ್ತೆಯ ಮಾರ್ಗವು ಮತ್ತು ಸ್ವಾಮಿ ಬನ್ನಿ ಮೂಡಿಯುವ ಸ್ಥಳದಲ್ಲಿ ಮಳೆ ನೀರು ನಿಂತು ವಾಸನೆ ಆವರಿಸಿತ್ತು. ಇದೆ ದಿವಸ ದಸರಾ ಹಬ್ಬ ಇರುವ ಸಂಬಂಧ ಪಟ್ಟಣ ಪಂಚಾಯತಿ ಸಿಬ್ಬಂದಿಯೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಲ್ಲಿ ಸ್ವಾಮಿಯ ಕಾರ್ಯ ಜರುಗಿಸಲು ಒಂದು ಅಳಿಲು ಸೇವೆ ಮಾಡಲು ಅನುಕೂಲವಾಯಿತು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಪಂ ಸದಸ್ಯರಾದ, ವಿನಯ್ ಕುಮಾರ್, ಕೆಂಗರಾಜ್ ಮುಖಂಡ ಬದ್ದಿ ಮರಿಸ್ವಾಮಿ, ದೇವಸ್ಥಾನ ಸಿಬ್ಬಂದಿ, ಪೌರ ಕಾರ್ಮಿಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು