ರಂಗಯ್ಯನದುರ್ಗ ಜಲಾಶಯ ದಿಂದ ಹಿರೇಕೆರೆ ಹಳ್ಳಿ ಕೆರೆಗೆ ನೀರು ತುಂಬಿಸಲು – ರೈತರ ಒತ್ತಾಯ.
ಹಿರೇಕೆರೆ ಹಳ್ಳಿ ಅ.12

ಇಂದು ಆಯುಧ ಪೂಜೆಯ ದಿನ ಮೊಳಕಾಲ್ಮೂರು ತಾಲೂಕಿನ ರಂಗಯ್ಯನ ದುರ್ಗ ಜಲಾಶಯ ಸಂಪೂರ್ಣವಾಗಿ ತುಂಬಿದ್ದು ಅತ್ಯಂತ ಸಂತೋಷ ದಾಯಕ ವಿಚಾರ. ಡ್ಯಾಮ್ ನ ಮೂರು ದ್ವಾರಗಳನ್ನು ಭಾಗಶಃ ಎತ್ತಲಾಗಿದೆ. ಆದರೆ ದುಃಖದ ವಿಚಾರ ವೇನೆಂದರೆ, ಹಿರೇಕೆರೆ ಹಳ್ಳಿ ಕೆರೆ ಖಾಲಿ ಇದ್ದು ಡ್ಯಾಮ್ ನ ಮೂಲಕ ಕೆರೆಗೆ ನೀರು ತುಂಬಿಸುವ ಟ್ಯೂಬ್ ದುರಸ್ತಿಯಲ್ಲಿದ್ದು ಡ್ಯಾಮ್ ನಲ್ಲಿ ಹೆಚ್ಚಾಗಿರುವ ನೀರು ನಮ್ಮ ರೈತರಿಗೆ ದೊರೆಯದೆ ಆಂಧ್ರ ಪ್ರದೇಶಕ್ಕೆ ಹೋಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಸಂಬಂಧಪಟ್ಟ ನೀರಾವರಿ ಅಭಿಯಂತರರು ಮತ್ತು ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆಂದು, ಸರಿಯಾದ ನಿರ್ವಹಣೆ ಮಾಡಿರುವುದಿಲ್ಲ ವೆಂದು ಸ್ಥಳೀಯ ರೈತರು ದೂರುತ್ತಿದ್ದಾರೆ. ಆದರೆ. ಕೆರೆಗೆ ಹೋಗುತ್ತಿರುವ ಟ್ಯೂಬನ್ನು ರಿಪೇರಿ ಮಾಡಿ ಹಿರೆಕೆರೆ ಹಳ್ಳಿ ಕೆರೆಗೆ ನೀರು ತುಂಬಿಸ ಬೇಕೆಂದು ಅಲ್ಲಿನ ರೈತರು ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಮ್ಮ ಜಿಲ್ಲೆಯಲ್ಲಿರುವ ಜಲಾಶಯ ನಮಗೆ ದೊರಕದೆ ಇರುವುದ ರಿಂದ ಈ ಕೆರೆಗೆ ಏನಾದರೂ ಮಾಡಿ ನೀರು ತುಂಬಿಸಲು ಮುಂದಾಗ ಬೇಕೆಂದು ಇನ್ನೂ ರೈತರು ಧ್ವನಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು