ವಿಜಯದಶಮಿ ನಿಮಿತ್ತವಾಗಿ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗಳ ಬಹುಮಾನ ಇವರಿಂದ – ಬಸವಲಿಂಗ ಸ್ವಾಮಿಗಳು ಮತ್ತು ಕೆ.ಒ ಸಂಗೀತ ಮಾಸ್ಟರ್ ಶಿವಣ್ಣ ವಿತರಿಸಿದರು.
ತುಮಕೂರ್ಲಹಳ್ಳಿ ಅ.14

ದಸರಾ ಹಬ್ಬದ ಪ್ರಯುಕ್ತ (TPL) ತುಮಕೂರ್ಲಹಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 4 ನೇ. ಬಾರಿಗೆ ಯಶಸ್ವಿಯಾಗಿ ಸಮಾರೋಪ ಸಮಾರಂಭ ದೊಂದಿಗೆ ಮುಕ್ತಾಯ ವಾಯಿತು. ಒಟ್ಟು 06 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಶಿವಣ್ಣ ಸಂಗೀತ ಶಿಕ್ಷಕರು ನೀಡಿದರು. ದ್ವಿತೀಯ ಬಹುಮಾನ ತಿಪ್ಪೇಶ್, ಗುರು, ನಾಗೇಶ್ ನೀಡಿದರು. ಸರಣಿ ಸರ್ವೋತ್ತಮ ಪ್ರಶಸ್ತಿಖಾಲೀದ್ ಹುಸೇನ್ ಶಿಕ್ಷಕರು & ಅಜ್ಜಯ್ಯ ನೀಡಿದರು.ಉತ್ತಮ ಬ್ಯಾಟ್ಸ್ಮನ್ & ಬೌಲರ್ ಸ್ವಾಮಿ, ಗಂಗಣ್ಣ ನೀಡಿದರು. ವಿಜೇತ ತಂಡಗಳು ಪ್ರಥಮ ಬಹುಮಾನಸುರೇಶ್ ತಂಡ ದ್ವಿತೀಯ ಬಹುಮಾನ ಪವನ್ ತಂಡತೃತೀಯ ಬಹುಮಾನ ಖಾಲೀದ್ ಹುಸೇನ್ ತಂಡದವರು ಪಡೆದರು. ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಸವಲಿಂಗ ಸ್ವಾಮೀಜಿ ಸಿದ್ದಯ್ಯನಕೋಟೆ ಇವರು ಬಹುಮಾನ ವಿತರಿಸಿ, ಯುವಕರು ಕ್ರೀಡೆಗಳಲ್ಲಿ ತೊಡಗಿಸಿ,ಸಮಾಜ ಮುಖಿ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಾಧಿಸಲು ಆಶಿರ್ವಾದ ನೀಡಿದರು. ಈ ಸಂದರ್ಭದಲ್ಲಿ ವಿರುಪಾಕ್ಷ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗೌಡರ ರಾಜಣ್ಣ, ಪಂಚಾಯಿತಿ ಅಜ್ಜಯ್ಯ, ತಿಪ್ಪಯ್ಯ, ಓಬಳೇಶ್, ಗಾದ್ರಯ್ಯ, ವಿಶ್ವನಾಥ್,ಟಿ ಎಸ್ ತಿಪ್ಪೇಸ್ವಾಮಿ, ಉಮೇಶ್, ಪ್ರದೀಪ್, ಸುರೇಶ್, ಗಂಗಣ್ಣ, ಹುಸೇನ್, ಬಡಗಿ ರಾಜಣ್ಣ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು