ಹದಗೆಟ್ಟ ರಸ್ತೆ ಗುಂಡಿಗಳನ್ನು ಮುಚ್ಚಿ ಅಮೂಲ್ಯ ಜೀವ ಉಳಿಸಿ ಎಂದು ಜೆ.ವಾಯ್.ಎಸ್ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಯವರಿಂದ – ಪಿ.ಡಬ್ಲ್ಯೂ.ಡಿ ಇಲಾಖೆಗೆ ಮನವಿ.
ಬಸವನ ಬಾಗೇವಾಡಿ ಅ.14

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವ್ಯಾಪ್ತಿಗೆ ಹಲವಾರು ಗ್ರಾಮಗಳ ಸಾತಿಹಾಳ ದಿಂದ ರಬಿನಾಳ ಕ್ರಾಸ್, ದಿಂಡವಾರ ಮಾರ್ಗ ಮಧ್ಯೆ ರಸ್ತೆ ಗುಂಡಿಮಯ ವಾಗಿದ್ದು ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸ್ಥಳೀಯ ಉದ್ಯೋಗಸ್ಥರು. ನಿತ್ಯ ಸಂಚರಿಸ ಬೇಕಿದೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವದ ರಿಂದ ಮಳೆಗಾಲ ಇರುದರಿಂದ ಗುಂಡಿಗಳಲ್ಲಿ ನೀರು ನಿಂತು ಸವಾರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ. ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಯೂ ಹೆಚ್ಚಿದೆ. ರಸ್ತೆಗಳಲ್ಲಿ ಬಿದ್ದ ಗುಂಡಿಗಳಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಯಾಗುತ್ತಿದೆ. ಎಂದು ಜಾಂಭವ ಯುವ ಸೇನಾ ಸಂಘಟನೆ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಇಂದು ಲೋಕೋಪಯೋಗಿ ಇಲಾಖೆ ಬಸವನ ಬಾಗೇವಾಡಿ, ಪ್ರಥಮ ದರ್ಜೆ ಸಾಹಾಯಕ ಸಿ.ಆ. ಬಡಗೇರ.ರವರಿಗೆ ಮನವಿ ಸಲ್ಲಿಸಿದರು.ದಿಂಡವಾರ ಮಾರ್ಗ ಬಸವನ ಬಾಗೇವಾಡಿ ಮತ್ತು ಹೂವಿನ ಹಿಪ್ಪರಗಿ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು. ಸಾತಿಹಾಳ ರಬಿನಾಳ ಕ್ರಾಸ್ ಮಾರ್ಗ ಮಧ್ಯೆ ಅಪಾರ ಪ್ರಮಾಣದ ಗುಂಡಿಗಳು ಬಿದ್ದಿವೆ. ಮಳೆಗಾಲ ಇರುವುದರಿಂದ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರು ಬಿದ್ದು ಗಾಯ ಗೊಂಡಿದ್ದಾರೆ.

ಈ ಬಸವನ ಬಾಗೇವಾಡಿ ಲೋಕೋಪಯೋಗಿ ಇಲಾಖೆಯಿಂದ 2019 -2020 ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿ ಸುಧಾಹರಣೆ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿ ಈ ರಸ್ತೆ ಕಾಮಗಾರಿ ಮಾಡಿದ್ದಾರೆ. ರಸ್ತೆ ಕಾಮಗಾರಿ ಮಾಡಿದ ಒಂದೇ ತಿಂಗಳಲ್ಲಿ ರಸ್ತೆ ಟಾರ್ ಕಿತ್ತು ರಸ್ತೆ ಹದಗೆಟ್ಟು ಹೋಗಿದ್ದು. ಇಲ್ಲಿಯ ತನಕ ಈ ರಸ್ತೆ ಮೇಲಿನ ಗುಂಡಿಗಳು ಬಾಯಿ ತೆರೆದು ಕೊಳ್ಳುತ್ತಾನೆ ಇವೆ. ಎಷ್ಟರ ಮಟ್ಟಿಗೆ ಈ ರಸ್ತೆ ಕಳಪೆ ಕಾಮಗಾರಿ ಮಾಡಿರಬಹುದೆಂದು ಮಹಾಂತೇಶ ಹಾದಿಮನಿ ಆರೋಪಿಸಿದ್ದಾರೆ.ಈ ಹದಗೆಟ್ಟಿರುವ ರಸ್ತೆಯಲ್ಲಿ ಜನ ಸಾಮಾನ್ಯರು ಸಂಚರಿಸ ಬೇಕಾದರೆ ಯಮಧರ್ಮ ರಾಜನಿಗೆ ಪತ್ರ ಬರೆದು ಜೀವವನ್ನು ಅಂಗೈಯಲ್ಲಿಟ್ಟು ಕೊಂಡು ಸಂಚಾರ ಮಾಡ ಬೇಕಾದ ಮಟ್ಟಕ್ಕೆ ರಸ್ತೆ ಹದಗೆಟ್ಟಿದೆ. ಇಂಚು ಇಂಚಿಗೂ ಬಾಯಿ ತೆರೆದು ಅಪಘಾತಕ್ಕೆ ಕಾದು ಕುಳಿತಿರುವ ಗುಂಡಿಗಳಿಗೆ ಬಸವನ ಬಾಗೇವಾಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿಫಲವಾಗಿ ಜನ ಸಾಮಾನ್ಯರ ಜೀವನದ ಜೊತೆ ಚಲ್ಲಾಟ ವಾಡುತ್ತಿದ್ದಾರೆಂದು ಮಹಾಂತೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿ ಶೀಘ್ರದಲ್ಲಿ ರಸ್ತೆ ಗುಂಡಿಗಳು ಮುಚ್ಚಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದಿದ್ದಾರೆ. ನಿಸ್ಕಾಳಜಿ ವಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಿ ಸರಿ ಪಡಿಸದಿದ್ದರೆ ಪಿ.ಡಬ್ಲ್ಯೂ.ಡಿ ಕಾರ್ಯಲಯದ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ