ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಂದ ಹಕ್ಕೊತ್ತಾಯಕ್ಕಾಗಿ ಸ್ವಾಭಿಮಾನ ನಡಿಗೆ.

ಹೊಸಪೇಟೆ ಅ.15

ತೃತೀಯ ಲಿಂಗಿಗಳಾದ ಲಿಂಗತ್ವ ಮತ್ತು ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಅವರ ಹಾಕ್ಕೊತ್ತಯಕ್ಕಾಗಿ “ಕರ್ನಾಟ ಸ್ವಾಭಿಮಾನ ನಡಿಗೆ” ಯನ್ನು ನಗರದಲ್ಲಿ ಹಮ್ಮಿಕೊಂಡಿದ್ದರು.ನಗರದ ಒಡಕರಾಯ ದೇವಸ್ಥಾನ ದಿಂದ ಮುಖ್ಯ ಬೀದಿಗಳಲ್ಲಿ ವಾದ್ಯಗಳೊಂದಿಗೆ ನೃತ್ಯ ಮಾಡುತ್ತಾ ತಮ್ಮ ಹಕ್ಕುಗಳ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ವೃತ್ತದ ವರೆಗೆ ತಲುಪಿ, ಮೂರ್ತಿಗೆ ಹೂ ಮಾಲೆಯನ್ನು ಹಾಕಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಮಾತನಾಡಿದರು. ಅವರು “ಕರ್ನಾಟ ಸ್ವಾಭಿಮಾನ ನಡಿಗೆ” ಮತ್ತು ಸ್ವಾಭಿಮಾನ ಹೋರಾಟವು ನಮ್ಮ ಹಕ್ಕುಗಳಿಗಾಗಿ ಮಾಡುತಿದ್ದೇವೆ. ಸರ್ಕಾರವು ನಮಗೆ 1% ಮೀಸಲಾತಿಯನ್ನು ನೀಡಿದೆ ಆದರೆ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇಲ್ಲಿಯವರೆಗೆ ನಮಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅಂಬೇಡ್ಕರ್ ಅವರು ಎಲ್ಲರಿಗೂ ಸಹಬಾಳ್ವೆ ಮತ್ತು ಸಮಾನತೆ ಎಂದು ಸಂವಿಧಾನವನ್ನು ಕೊಟ್ಟಿದ್ದಾರೆ ಆದರೆ ನಮ್ಮ ಸಮುದಾಯಕ್ಕೆ ಇದುವರೆಗೂ ಯಾವುದೇ ರೀತಿಯ ಸಮಾನ ಹಕ್ಕುಗಳು ಸಿಗುತ್ತಿಲ್ಲ. ಯಾವುದೇ ಸರ್ಕಾರಗಳು ಬರಲಿ ನಮ್ಮ ಸಮುದಾಯಕ್ಕೆ ಎಲ್ಲಾ ತರಹದ ಸೌಲಭ್ಯಗಳು ಒದಗಿಸಬೇಕು. ಎಲ್ಲಾ ಜಾತಿ ವರ್ಗಗಳಿಗೂ ನಿಗಮಗಳಿವೆ, ನಮ್ಮ ತೃತೀಯ ಲಿಂಗಿಗಳಿಗೆ ನಿಗಮಗಳಿಲ್ಲ. ಮೊದಲು ನಮ್ಮ ಅಭಿವೃದ್ಧಿಗಾಗಿ ನಿಗಮಗಳು ಸ್ಥಾಪನೆ ಮಾಡಿ ಸಾವಿರಾರು ಕೋಟಿ ಹಣ ಇಟ್ಟು ಅಭಿವೃದ್ಧಿ ಪಡಿಸಬೇಕು. ನಮ್ಮಲ್ಲೂ ವಿದ್ಯಾಭ್ಯಾಸ ಮಾಡಿದವರಿದ್ದಾರೆ ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿಭಾಗ ಮಟ್ಟದಲ್ಲಿ ಮತ್ತು ಎಲ್ಲಾ ಕಾಲೇಜುಗಳಲ್ಲಿ ಅವಕಾಶ ಮಾಡಿ ಕೊಡಬೇಕು. ನಮ್ಮಲ್ಲಿ ಓದಿದವರು ಇದ್ದಾರೆ ಅವರು ಬಿಕ್ಷಾಟನೆಯನ್ನು ಬಿಟ್ಟು ಉದ್ಯೋಗ ಪಡೆದು ಕೊಳ್ಳಬೇಕೆನ್ನುವ ಹಂಬಲ ಇದೆ.

ಅದಕ್ಕೆ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಕಡ್ಡಾಯವಾಗಿ ಉದ್ಯೋಗ ಕೊಡಬೇಕು. ಗುರುತಿನ ಚೀಟಿ ಅಥವಾ ಇತರ ದಾಖಲೆಗಳು ಮಾಡಿ ಕೊಳ್ಳಲು ನಮ್ಮವರಿಗೆ ದಾಖಲೆಗಳನ್ನು ಕೇಳುತ್ತಿದ್ದಾರೆ, ಇದನ್ನು ಪರಿಗಣಿಸದೆ ಇವರು ತೃತೀಯ ಲಿಂಗಿಗಳು ಮತ್ತು ವಾಸದ ಅವಧಿಯನ್ನು ಸ್ಥಳೀಯ ಆಡಳಿತವು ನಮೂದಿಸಿ ಕೊಡಬೇಕು ಅದರ ಮುಖಾಂತರ ದಾಖಲೆಗಳನ್ನು ಮಾಡಿ ಕೊಳ್ಳಲು ಸರಳವಾಗುತ್ತದೆ. ಅವರು ಎಲ್ಲೇ ಇರಲಿ ಉದ್ಯೋಗ ಮತ್ತು ವಸತಿ ಯೋಜನೆಯನ್ನು ಕಡ್ಡಾಯವಾಗಿ ಕಲ್ಪಿಸಿ ಕೊಡಬೇಕು. ಸರ್ಕಾರ ಈ ನಮ್ಮ ಬೇಡಿಕೆಗಳನ್ನು ಎಲ್ಲಿವರೆಗೂ ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.ನಿಶಾ ಗುಳ್ಳೂರು ಮಾತನಾಡಿ ಸರ್ಕಾರ ನಮ್ಮ ಹಕ್ಕುಗಳನ್ನು ಈಡೇರಿಸಬೇಕು. ಕುಟುಂಬ ಸಮಾಜ ಮತ್ತು ನಮ್ಮನ್ನು ಆಳುವ ಸರ್ಕಾರಗಳು ಈ ಮೂರು ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಬಂದರೆ ಮಾತ್ರ ಅಂಬೇಡ್ಕರ್ ಅವರು ಹೇಳಿರುವ ಸಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ಮೂರು ವಲಯಗಳಲ್ಲಿ ಬದಲಾಗ ಬೇಕೆಂದು ಇಂದಿನ ಹೋರಾಟ ಪ್ರಾರಂಭಿಸಿದ್ದೇವೆ, ನಮ್ಮ ಕುಟುಂಬಗಳಲ್ಲಿ ಪರಿವರ್ತನೆ ಆಗಬೇಕಿದೆ. ಜನ ಪ್ರತಿನಿದಿಗಳು ನಮಗಾಗಿ ಕಾನೂನುಗಳನ್ನು ರಚಿಸಬೇಕು. ನಮ್ಮ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದರು.

ಹಕ್ಕೊತ್ತಾಯಗಳು:-

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸರ್ವತೋಮಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು.

1% ಮೀಸಲಾತಿ ಅಡಿಯಲ್ಲಿ ಉದ್ಯೋಗವನ್ನು ಪಡೆಯಲು ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಬೇಕು.

ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರಿಗೆ ಬಿ.ಪಿ.ಎಲ್. ರೇಷನ್ ಕಾರ್ಡ್ ನೀಡಬೇಕು.ಉದ್ಯಮಶೀಲತೆಯಲ್ಲಿ ತೊಡಗಿ ಕೊಳ್ಳಲು ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ 2,00,000 ಲಕ್ಷ ನೆರವು ನೀಡಬೇಕು.

ಕರ್ನಾಟಕ ಬಿಕ್ಷಾಟನೆಯ ನಿಷೇಧ ಕಾಯ್ದೆಯನ್ನು ರದ್ದು ಪಡಿಸುವ ಮೂಲಕ ಭಿಕ್ಷಾಟನೆಯನ್ನು ನಿರಪರಾಧೀಕರಣ ಗೊಳಿಸಬೇಕು.

ಮಹೇಶ್ ಪಾಟೀಲ್ ಸಂಗಮ ಮಿತ್ರ ಕೋ ಆರ್ಡಿನೇಟರ್, ಸಣ್ಣ ಮಾರಪ್ಪ, ವೀಣಾ, ಸುಧಾ ಗ್ರಾಮ ಪಂಚಾಯತ್ ಸದಸ್ಯರು, ವಡ್ಡರ ಮಂಜಮ್ಮ,ಶಹನಾಜ್ ಬಿ, ಮಂಜಮ್ಮ ಕೆ, ಶಾಲಿನಿ, ಪೂರ್ತಿ, ಲಕ್ಷ್ಮಿ, ಪ್ರಗತಿ.ಎಂ ಬಿ, ಕಾವ್ಯ, ಶ್ರುತಿ ಇತರರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button