ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತೃಪ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ – ಸೃಜನಶೀಲ ಕಾರ್ಯಕ್ರಮ.
ಟಿ.ಬಿ ಡ್ಯಾಮ್ ಅ.15

ಹೊಸಪೇಟಿ ತಾಲೂಕಿನ ಟಿ.ಬಿ ಡ್ಯಾಮ್ ವಲಯದ ಗಾಳೆಮ್ಮನ ಗುಡಿ ಕಾರ್ಯ ಕ್ಷೇತ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೃಪ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ಅಂಗವಾಗಿ ಕೈ ತೋಟ ರಚನೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಮಾರುತಿ ಎಸ್, ಗ್ರಾಮ ಪಂಚಾಯತ್ ಸದಸ್ಯರು ದ್ರಾಕ್ಷಯಣಿವರು ತೃಪ್ತಿ ಜ್ಞಾನ ವಿಕಾಸ ಕೇಂದ್ರ ಅಧ್ಯಕ್ಷರು ದಾದಿಮಾವರು, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ತಾಲೂಕಿನ ಯೋಜನಾಧಿಕಾರಿಯವರು ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲ ಉದ್ದೇಶ, ಮತ್ತು ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಾಕ್ಷಯಣಿಯವರು ಮಾತನಾಡಿ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಖಾ, ಸೇವಾ ಪ್ರತಿ ನಿಧಿ ವಿಜಯ ರಡ್ಡಿ, ಮತ್ತು ಕೇಂದ್ರದ 5 ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ವಿಶೇಷತೆ ಕಾರ್ಯಕ್ರಮದಲ್ಲಿ ಭಾಗವಸಿದ ಪ್ರತಿಯೊಬ್ಬ ಸದಸ್ಯರಿಗೂ ಪವಿತ್ರವಾದ ತುಳಸಿ ಸಸಿ ವಿತರಣೆ ಮಾಡಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ