ಅಮರ ಶಿಲ್ಪಿ ಜಾಕಣಾಚಾರಿ ಜಯಂತಿ ಹಾಗೂ ಸೋಮಣ್ಣ ತಾತ ಹುಟ್ಟು ಹಬ್ಬದ – ಅಂಗವಾಗಿ ಸಸಿ ನೆಟ್ಟ ವನಸಿರಿ ತಂಡ.
ಸುಲ್ತಾನಾಪೂರ ಜ.03

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸುಲ್ತಾನಾಪೂರ ಗ್ರಾಮದಲ್ಲಿ ವನಸಿರಿ ಪೌಂಡೇಷನ್ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ, ವನಸಿರಿ ಪೌಂಡೇಷನ್ ಸುಲ್ತಾನಾಪೂರ ಗ್ರಾಮ ಘಟಕ ಉದ್ಘಾಟನೆ ಹಾಗೂ ಸೋಮಣ್ಣ ತಾತ ಸುಲ್ತಾನಾಪೂರ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಅಂಗವಾಗಿ “ಸಸಿ ನೆಡುವ ಕಾರ್ಯಕ್ರಮ” ಹಮ್ಮಿ ಕೊಳ್ಳಲಾಯಿತು.ಇದೇ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ಸುಲ್ತಾನಾಪೂರ ಗ್ರಾಮ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಿ ಶಾಲು ಹಾಕಿ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.

ಈ ಸಂಧರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ಅಂಬಣ್ಣ ಗೊರೇಬಾಳ, ಸೋಮಣ್ಣ ತಾತ ವಿರೂಪಣ್ಣ ತಾತ, ಮಂಜುನಾಥ ಬಡಿಗೇರ, ಸುರೇಶ ಗೊಬ್ಬರಕಲ್ಲು ತಾಲೂಕ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ರಾಜು ಪತ್ತಾರ ಬಳಗಾನೂರು, ಚನ್ನಪ್ಪ ಕೆ ಹೊಸಹಳ್ಳಿ, ಮುದಿಯಪ್ಪ ಹೊಸಳ್ಳಿ ಕ್ಯಾಪ್, ಬದ್ರಿನಾಥ ತಿಮ್ಮಪೂರ, ವನಸಿರಿ ಗ್ರಾಮ ಘಟಕದ ಪದಾಧಿಕಾರಿ ಗಳಾದ ಡಾ, ಮುತ್ತಣ್ಣ ಕೆ, ಶಿವು ಕಂಬಳಿ, ಮಲ್ಲಿಕಾರ್ಜುನ ಕೆ, ಪ್ರಕಾಶ ಅಂಗಡಿ, ಗಣೇಶ ಅಂಗಡಿ, ಅಮರೇಶ ಕೆ, ಬಸವ ನಾಯಕ, ಅಮರೇಶ ನಾಯಕ, ಚನ್ನಪ್ಪ ಭೋವಿ, ಸಿದ್ಧಲಿಂಗಪ್ಪ ಮಾನೇಗರ, ಶಂಕ್ರಪ್ಪ ಭೋವಿ, ಶಾಂತರಾಜ ನಾಯಕ, ಹನುಮನಗೌಡ, ಶಿವಪ್ಪ ರಂಗಾಪೂರ, ಉಪೇಂದ್ರ ಆಚಾರಿ, ಕಾಶೀಪತಿ ಜವಾಳಗೇರ, ದೇವೇಂದ್ರ ಗದ್ರಟಗಿ, ಬಸವರಾಜ LIC, ಮಂಜುನಾಥ ತಿಡಿಗೋಲ, ಹಾಗೂ ಊರಿನ ಗುರು ಹಿರಿಯರು ಯುವಕರು ಇದ್ದರು ಎಂದು ವರದಿಯಾಗಿದೆ.