ಎಲ್ಲಾ ಜಾತಿ ಧರ್ಮದ ಜನರನ್ನು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮುಖಂಡರನ್ನು ಒಂದೇ ವೇದಿಕೆಯಲ್ಲಿ ಕೂರಿಸುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗಿದೆ : ಸೂರಿ ಶ್ರೀನಿವಾಸ್……
ತರೀಕೆರೆ (ಮಾ,2) :
ಎಲ್ಲಾ ಜಾತಿ ಧರ್ಮದ ಜನರನ್ನು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮುಖಂಡರನ್ನು ಒಂದೇ ವೇದಿಕೆಯಲ್ಲಿ ಕೂರಿಸುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗಿದೆ , ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ಅವರು, ರಂಗೇನಹಳ್ಳಿಯ ಅಂಬಾಭವಾನಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಮಾಡಿ ಮಾತನಾಡಿದರು. ಸಮಸ್ಯೆಗಳ,ಕೊರತೆಗಳ ಬಗ್ಗೆ ನೇರ ಮುಖ್ಯಮಂತ್ರಿಗಳಿಗೆ ನಿರ್ಣಯಗಳ ಮನವಿ ಕೊಟ್ಟು ಬರುತ್ತೇನೆ ಆ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ ಪಿ ಕುಮಾರ್ , ಹಿರಿಯ ಪತ್ರಕರ್ತರಾದ ಅನಂತ್ ನಾಡಿಗ್ ರವರು ಪುಸ್ತಕ ಬಿಡುಗಡೆ ಮಾಡಿ,ಕನ್ನಡದ ಕನಸನ್ನು ಕಟ್ಟುವ ಮನಸುಗಳು ನಮ್ಮದಾಗಬೇಕು ತರೀಕೆರೆ ತಾಲೂಕಿನಲ್ಲಿ ಇರುವ ಭದ್ರಾ ನದಿ ನೀರು ತರೀಕೆರೆಗೆ ಸಿಗುತ್ತಿಲ್ಲ ಕೋಲಾರದಂತಹ ದೂರದ ಜಿಲ್ಲೆಗಳಿಗೆ ಪ್ರತಿನಿತ್ಯ ಹರಿಯುತ್ತಿದೆ. ಪತ್ರಿಕೆಗಳು ಸಾಹಿತ್ಯದ ಮುಖಾಂತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿವೆ.
ಉತ್ತಮವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಡಾ. ರಾಮಲಿಂಗೇಶ್ವರ . ಪ್ರಾಧ್ಯಾಪಕರು ಬೆಂಗಳೂರು ರವರು ಮಾತನಾಡಿ ಕಲೆ,ಸಾಹಿತ್ಯ,ನಾಟಕ,ಅಭಿನಯ,ಓದುವುದು,ಬರೆಯುವುದು,ಕ ಸಾ ಪ ಆಸ್ತಿಯಾಗಿದೆ. ಸಾಹಿತ್ಯ ಇರುವುದೇ ಮಹಿಳೆಯರಲ್ಲಿ ಉತ್ತಮ ಸಂಪ್ರದಾಯಗಳೊಂದಿಗೆ ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಚ್ ಎನ್ ಮಂಜುನಾಥ್ ರವರು ಮಾತನಾಡಿ ಸಾಹಿತಿಗಳು ಸಾಹಿತ್ಯವನ್ನು ರಚಿಸಿ ಬೆಳೆಸಿ ಜನರ ಮನಮುಟ್ಟುವಂತೆ ಮಾಡಿದ್ದಾರೆ.
ಕುವೆಂಪು , ದ.ರಾ ಬೇಂದ್ರೆ ಮುಂತಾದವರು ತಮ್ಮ ಬರವಣಿಗೆಯ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಾಯಿತು. ಕನ್ನಡದ ಹಿರಿಮೆ, ಜಲ,ನಾಡು-ನುಡಿ, ಸಾಹಿತ್ಯದ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಿರುತ್ತಾರೆ. ಪತ್ರಿಕೆಗಳನ್ನು ಪುಸ್ತಕಗಳನ್ನು ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರತಿ ಮನೆ ಮನೆಗೂ ಸಾಹಿತ್ಯದ ಸಿರಿ ತಲುಪಬೇಕು ಎಂದು ಹೇಳಿದರು.
ಬಿ.ಎಸ್. ಭಗವಾನ್ ರವರು ಸಮ್ಮೇಳನ ಅಧ್ಯಕ್ಷರ ಪರಿಚಯ ಮಾಡಿದರು. ಸಮ್ಮೇಳನ ಅಧ್ಯಕ್ಷರಾದ ಕೆ.ಎಂ ರೇವಣ್ಣ ರವರು ಜಿಲ್ಲೆಯಲ್ಲಿರುವ ಎಲ್ಲಾ ಸಾಹಿತಿಗಳು ಮತ್ತು ಕವಿಗಳು ಮತ್ತು ನಾಡು ನುಡಿಯ ಬಗ್ಗೆ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಮತ್ತು ಸಂಪತ್ತಿನ ಬಗ್ಗೆ ವಿವರವಾಗಿ ತಿಳಿಸಿದರು. ಕೃಷಿ ಗೋಷ್ಠಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ,ನಂತರ ಬಹಿರಂಗ ಅಧಿವೇಶನವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು ರಾಷ್ಟ್ರಧ್ವಜವನ್ನು ರಂಗೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವನಿತಾ ಚಂದ್ರಶೇಖರ್ ರವರು ನೆರವೇರಿಸಿದರು, ನಾಡ ಧ್ವಜವನ್ನು ತಾಲೂಕು ಅಧ್ಯಕ್ಷರಾದ ನವೀನ್ ಪೆನ್ನಯ್ಯರವರು ನೆರವೇರಿಸಿದರು. ರಂಗೆನಹಳ್ಳಿಯ ರಾಜಬೀದಿಗಳಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ನಡೆಸಲಾಯಿತು.
ವರದಿಗಾರರು : ತರೀಕೆರೆ N. ವೆಂಕಟೇಶ್…