ಜನಗಳ ಮಧ್ಯ ಇದ್ದು ಜನರ ಕಷ್ಟ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವವನೆ ನಿಜವಾದ ಜನನಾಯಕ ; ಮಾಜಿ ಶಾಸಕರಾದ ಟಿ ಎಚ್ ಶಿವಶಂಕರಪ್ಪ…..
ಚಿಕ್ಕಮಗಳೂರು ( ತರೀಕೆರೆ, ಮಾ.1) :
ಜನರ ಮಧ್ಯೆ ಕೆಲಸ ಮಾಡುವ ಯುವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಪೀಳಿಗೆಗೆ ಬೇಕು ಎಂದು ಮಾಜಿ ಶಾಸಕರಾದ ಟಿಎಚ್ ಶಿವಶಂಕರಪ್ಪನವರು ತರೀಕೆರೆ ಟೌನ್ ಕ್ಲಬ್ ನಲ್ಲಿ ಕರೆದಿದ್ದ 2023ರ ವಿಧಾನಸಭಾ ಚುನಾವಣಾ ಹಿನ್ನೆಲೆಯ ಬೃಹತ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು. ನಾನು ಪಕ್ಷಕ್ಕೆ ಬದ್ಧನಾಗಿದ್ದೇನೆ ಅವಕಾಶ ಕೊಟ್ಟರೆ ನಾನು ಅಭ್ಯರ್ಥಿಯಾಗಲು ಸಿದ್ಧನಿದ್ದೇನೆ ಯಾರೋ ನನಗಾಗದವರು ನಾನು ಪಕ್ಷದಿಂದ ದೂರ ಉಳಿದಿದ್ದೇನೆ ಎಂದು ಅಪಪ್ರಚಾರ ಮಾಡಿದ್ದಾರೆ. ನೀವೆಲ್ಲರೂ ಪಕ್ಷ ಕಟ್ಟಿದ್ದೀರಿ ಬೆಳೆಸಿದ್ದೀರಿ ಈ ಸಭೆಯಲ್ಲಿ ಭಾಗವಹಿಸಿರುವ ಎಂಟು ಜನ ಆಕಾಂಕ್ಷಿಗಳು ಸಹ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ ಪಕ್ಷವು ಯಾರಿಗೆ ಟಿಕೆಟ್ ಕೊಟ್ಟರು ಸಹ ಒಪ್ಪಿಕೊಳ್ಳಬೇಕು, ಸಹಕರಿಸಬೇಕು ಎಂದು ಹೇಳಿದರು.
ವಕೀಲರಾದ ಟಿಎಲ್ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ನಾಯಕರು ಒಟ್ಟಾಗಿ ಒಬ್ಬರನ್ನು ಆಯ್ಕೆ ಮಾಡಿರಿ ಎಂದು ರಾಜ್ಯ ವರಿಷ್ಠ ನಾಯಕರು ತಿಳಿಸಿದ್ದಾರೆ ಟಿ ಎಚ್ ಶಿವಶಂಕರಪ್ಪ ಅಭ್ಯರ್ಥಿ ಆಗಬೇಕು ಎಲ್ಲರ ಸಹಕಾರ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ನಗರ ಅಧ್ಯಕ್ಷರಾದ ಟಿ ಎಸ್ ರಮೇಶ್ ಮಾತನಾಡಿ ನಾನು ಕಾಂಗ್ರೆಸ್ಸಿನ ಇಂದಿನ ಶಾಸಕರೊಟ್ಟಿಗೆ ಕೆಲಸ ಮಾಡಿದ್ದೇನೆ ವರಿಷ್ಠರ ಮಾರ್ಗದರ್ಶನದಂತೆ ಹೊಸಬರಿಗೆ, ಯುವಕರಿಗೆ,ವಿಧಾನಸಭಾ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಮಾಜಿ ಪುರಸಭಾ ಅಧ್ಯಕ್ಷರಾದ ಗೊಲ್ಲರಹಳ್ಳಿ ಬಸವರಾಜ್ ಮಾತನಾಡಿ ಈ ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಶಾಸಕರು ಆಳ್ವಿಕೆ ಮಾಡಿದ್ದಾರೆ ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. 12 ಜನ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಕೊಟ್ಟರು ನಾವೆಲ್ಲರೂ ಒಮ್ಮತದಿಂದ ಶ್ರಮಿಸೋಣ. ಕಾಂಗ್ರೆಸ್ ಉಳಿಸೋಣ ಬೆಳೆಸೋಣ ಎಂದು ಹೇಳಿದರು. ಪುರಸಭಾ ಸದಸ್ಯರು ಹಾಗೂ ವಿಧಾನಸಭಾ ಆಕಾಂಕ್ಷಿಯಾಗಿರುವ ಶಶಾಂಕ್ ಮಾತನಾಡಿ ವಿಧಾನಸಭಾ ಅಭ್ಯರ್ಥಿಯಾಗಲು ಅರ್ಜಿ ಹಾಕಿರುವವರೆಲ್ಲರೂ ಸಹ ಸಮಾಜ ಸೇವೆ ಮಾಡಬೇಕು ಜನರು ಬಯಸಿದ ಬದಲಾವಣೆ ಮಾಡುವ ಉದ್ದೇಶ ಹೊಂದಿದ್ದಾರೆ. ಯಾರೊಬ್ಬರ ವಿರುದ್ಧ ಸಭೆ ಅಲ್ಲ ಇದು. ಪಕ್ಷವು ಯಾರಿಗೂ ಸಹ ಉಮೇದುವಾರಿಕೆ ನೀಡುವ ಭರವಸೆ ನೀಡಿಲ್ಲ ನಾವೆಲ್ಲರೂ ಸಹ ಆಕಾಂಕ್ಷಿಗಳೇ ಆಗಿದ್ದೇವೆ ಯಾರಿಗೆ ಅವಕಾಶ ಸಿಕ್ಕರೂ ಸಹ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಅಜ್ಜಂಪುರದ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಎಂ ಕೃಷ್ಣಮೂರ್ತಿ ಮಾತನಾಡಿ ಪಕ್ಷದ ಟಿಕೆಟ್ ಬಯಸಿರುವ ಆಕಾಂಕ್ಷಿಗಳಲ್ಲಿ ಯಾರನ್ನು ಭಿನ್ನಾಭಿಪ್ರಾಯ ಇಲ್ಲ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಆದ್ದರಿಂದ ಮಾಜಿ ಶಾಸಕರಾದ ಟಿಎಚ್ ಶಿವಶಂಕರಪ್ಪನವರ ನಾಯಕತ್ವದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯು ಅವರ ಮೇಲಿದೆ ಎಂದು ಹೇಳಿದರು.
ಈಸಭೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೊಲ್ಲರಹಳ್ಳಿ ರಂಗಪ್ಪ, ಬಿಎಸ್ಆರ್ ಮಂಜುನಾಥ, ಶಾಂತವೀರಪ್ಪ,ರವಿ ಕಿಶೋರ್, ಟಿ ಆರ್ ನಾಗರಾಜ್ ಎನ್ ರಾಜು ಪುರಸಭಾ ಮಾಜಿ ಅಧ್ಯಕ್ಷರಾದ ಯಶೋದಮ್ಮ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ ಉಪಸ್ಥಿತರಿದ್ದರು. ಪುರಸಭಾ ಸದಸ್ಯರಾದ ಟಿಎಮ್ ಭೋಜರಾಜ್ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.
ವರದಿಗಾರರು : ತರೀಕೆರೆ N. ವೆಂಕಟೇಶ್