ನಮ್ಮ ಭಾಗದ ನಟನನ್ನು ಬೆಂಬಲಿಸುವಂತೆ ಕೋರಿದ ಕಾಂಗಯ ಮುಖಂಡ ವಕೀಲ ಶಿವರಾಜ ನಾಯಕ.
ಮಾನ್ವಿ ಅ.18
ರಾಯಚೂರು ಭಾಗದವರು ಚಲನ ಚಿತ್ರ ಕ್ಷೇತ್ರದಲ್ಲಿ ಮಿಂಚುತ್ತಿರುವುದು ತುಂಬ ವಿರಳ, ಆದರೆ ಬಡತನದಲ್ಲಿ ಹುಟ್ಟಿ ಅದನ್ನು ಮೆಟ್ಟಿನಿಂತು ಸಾಧನೆಗೆ ಯಾವುದು ಅಡ್ಡಿ ಇಲ್ಲವೆಂದು ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಕುವರ ಮಾಹಿನ್ ಕುಬೇರ್ ಪ್ರಕರಣ ತನಿಖಾ ಹಂತದಲ್ಲಿದೆ ಎಂಬ ಚಲನ ಚಿತ್ರದಲ್ಲಿ ನಟನೆ ಮಾಡಿದ್ದರಿಂದ ಈ ಭಾಗದ ಹೆಮ್ಮೆ ಎಂದು ಬಣ್ಣಿಸಿದ್ದಾರೆ.
ಮಾಹಿನ್ ಕುಬೇರ್ ಕಳೆದ 6 ವರ್ಷಗಳಿಂದ ಧಾರವಾಹಿ ಸೇರಿದಂತೆ 500 ಕ್ಕೂ ಹೆಚ್ಚು ರಂಗ ಭೂಮಿಯಲ್ಲಿ ಪಾತ್ರಧಾರಿಯಾಗಿ ನಟಿಸಿದ್ದಲ್ಲದೆ ಪ್ರಸ್ತುತ ಅಣ್ಣಯ್ಯ ಎಂಬ ಧಾರವಾಹಿಯಲ್ಲಿ ಸೋಮೇಗೌಡನ ಪಾತ್ರಧಾರಿಯಾಗಿ ಮಾಡುತ್ತಿದ್ದರಿಂದ ರಾಯಚೂರು ಜಿಲ್ಲೆಗೆ ದೊಡ್ಡ ಕೊಡುಗೆ ಎಂದು ಕಾಂಗ್ರೆಸ್ ಮುಖಂಡ ಶಿವರಾಜ ನಾಯಕ ವಕೀಲ ತಿಳಿಸಿದರು.
ಮಾಹಿನ್ ಕುಬೇರ್ ನಟಿಸಿದ ಪ್ರಕರಣ ತನಿಖಾ ಹಂತದಲ್ಲಿದೆ ಎಂಬ ಚಲನ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಮಾನ್ವಿಯಲ್ಲಿ ಅಕ್ಟೋಬರ್ 25 ರಂದು ಥೇಟರ್ ನಲ್ಲಿ ಬಿಡುಗಡೆ ಯಾಗಲಿದೆ. ಒಟ್ಟಾರೆಯಾಗಿ ರಾಯಚೂರು ಜಿಲ್ಲೆಯ ಕಡೆಯ ಚಲನ ಚಿತ್ರವನ್ನು ನೋಡಿ ಹರಸಿ ಹಾರೈಸಬೇಕೆಂದು ಕೋರಿ ಕೊಂಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ