ಚಿಕ್ಕದಾದರೂ ಕೂಡ ಚೊಕ್ಕದಾಗಿ ಸಮಾಜದ ಎಲ್ಲಾ ಮುಖಂಡರುಗಳು ಸೇರಿ ಶ್ರೀ ವಾಲ್ಮೀಕಿ ಜಯಂತಿ – ಆಚರಿಸಿದ ಶಾಸಕರು.

ಮೊಳಕಾಲ್ಮುರು ಅ.18

ಮೊಳಕಾಲ್ಮೂರು ತಾಲೂಕು ಆಡಳಿತ ಸೌಧ ಆವರಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಂಗವಾಗಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಶ್ರೀ ಮಹರ್ಷಿ ವಾಲ್ಮೀಕಿ ಇವರು ದೇಶದ ಮಹಾನ್ ವ್ಯಕ್ತಿ ಎಂದು ತಿಳಿಯಬೇಕು ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಲಿಲ್ಲ ಎಲ್ಲಾ ಸಮುದಾಯದವರನ್ನು ಬೆಂಬಲಿಸಿ ಕೊಂಡರು ಇವರು ರಾಮಾಯಣ ಮಹಾಭಾರತ ಪವಿತ್ರವಾದ ಗ್ರಂಥ ರಚಿಸಿದ ಮಹಾನ್ ಪುರುಷರು ಹೌದು ಎಂದು ಈ ಕಾರ್ಯಕ್ರಮವನ್ನು ಬಾಳ ಸುಂದರವಾಗಿ ಚಿಕ್ಕದಾದ ಸಮಾವೇಶವಾದರೂ ಅಚ್ಚುಕಟ್ಟಾಗಿ ವಾಲ್ಮೀಕಿ ಸಮುದಾಯದ ಮುಖಂಡರಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದ ರಿಂದ ನನಗೆ ಬಹಳ ಮೆಚ್ಚುಗೆ ಅನಿಸಿತ್ತು ಎಂದು ನನ್ನ ಶಾಸಕರ ಅನುದಾನದಲ್ಲಿ ವಾಲ್ಮೀಕಿ ಭವನಕ್ಕೆ 15 ಲಕ್ಷ ಅನುದಾನ ಕೊಡುತ್ತೇನೆ. ಮತ್ತು ಮುಂದಿನ ವರ್ಷದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಮಾಡಿ ಬಡ ಜನಗಳಿಗೆ ಅನುಕೂಲವಾಗಲೆಂದು ಮತ್ತು ಯಾವ ತಾಲೂಕಿನಲ್ಲಿ ಇಂತಹ ವಾಲ್ಮೀಕಿ ಭವನ ಕಾಣುವುದಕ್ಕೆ ಆಗುವುದಿಲ್ಲ ಅಂತಹ ಭವನ ಆಗುತ್ತದೆ ಈ ಜಾಗ ಸಹ ಬಹಳ ಸುಂದರವಾಗಿ ಹಚ್ಚು ಕಟ್ಟು ಪ್ರದೇಶ ಎಂದು ಕಾಣಬಹುದು ಅದಕ್ಕಾಗಿ ಬಹಳ ಅದ್ದೂರಿಯಾಗಿ ಸಂಭ್ರಮದಿಂದ ವಾಲ್ಮೀಕಿ ಜಯಂತಿಯನ್ನು ಮುಂದಿನ ವರ್ಷ ಮಾನ್ಯ ಮುಖ್ಯಮಂತ್ರಿಗಳು ಮತ್ತು ಡಿ.ಕೆ ಶಿವಕುಮಾರ್ ಕರೆಸಿ ಆಚರಿಸೋಣ ಮತ್ತು ನಾಯಕನಹಟ್ಟಿ ಗ್ರಾಮದಲ್ಲಿ 40 ಲಕ್ಷ ವಾಲ್ಮೀಕಿ ಭವನಕ್ಕೆ ಯೋಜನೆ ರೂಪಿಸಿದ್ದೇನೆ ಇನ್ನೂ ಹೆಚ್ಚಿನ ಹದಿನೈದು ಲಕ್ಷ ನನ್ನ ಶಾಸಕರ ಅನುದಾನದಲ್ಲಿ ಕೊಡ್ತೀನಿ ಎಂದು ಎನ್. ವೈ ಗೋಪಾಲಕೃಷ್ಣ ಶಾಸಕರು ಮಾತನಾಡಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಜಗದೀಶ್ ತಾಲೂಕು ಪಂಚಾಯತ್ ಇ.ಓ ಹನುಮಂತಪ್ಪ, ವಾಲ್ಮೀಕಿ ಸಮಾಜದ ಮುಖಂಡರುಗಳು ಹಾಗೂ ಎಲ್ಲಾ ಸಮಾಜದ ಮುಖಂಡರಗಳು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button