ದೈಹಿಕ ಶಿಕ್ಷಕರ ಅನೇಕ ಬೇಡಿಕೆಗಳನ್ನು ಜುಲೈ ಅಂತ್ಯದೊಳಗೆ ಈಡೇರಿಸಿ – ಇಲ್ಲದಿದ್ದರೇ ವರ್ಷದ ಕ್ರೀಡಾಕೂಟ ಬಹಿಷ್ಕರಿಸಿ.
ಹುನಗುಂದ ಜೂನ್.21

ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ, ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಸೇರಿದಂತೆ ಸರ್ಕಾರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಿಂದ ಶುಕ್ರವಾರ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಎ.ಎಚ್. ನದಾಫ್ ಮಾತನಾಡಿ ದೈಹಿಕ ಶಿಕ್ಷಣ ಶಿಕ್ಷಕರ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ೧೭ ವರ್ಷಗಳಿಂದ ನಿರಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಾ ಬಂದರೂ ಕೂಡಾ ನಮಗೆ ನೀಡಬೇಕಾದ ನ್ಯಾಯಯುತ ಬೇಡಿಕೆಗಳನ್ನು ಇಲ್ಲಿವರಿಗೆ ಈಡೇರುತ್ತಿಲ್ಲ, ಶಾಲೆಗಳಲ್ಲಿ ಸಹ ಶಿಕ್ಷಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಮಧ್ಯೆ ತಾರತಮ್ಯ,ಅಸಮಾನತೆ ಬೆಳೆಯುತ್ತಿದೆ. ಸಮಾನ ವಿದ್ಯಾರ್ಹತೆ,ಕೆಲಸಗಳನ್ನು ಮಾಡುತ್ತಿದ್ದರೂ ಕೂಡಾ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಂಬಂಧಿಸಿದಂತೆ ಪ್ರೋ.ಎಲ್.ಆರ್.ವೈದ್ಯನಾಥನ್ ವರದಿಯ ಅನುಷ್ಠಾನದ ಶಿಫಾರಸ್ಸುನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡು ಕ್ಯಾಬಿನೆಟ್‌ನಲ್ಲಿ ಅನುಮೋಧಿಸಿ ಕರ್ನಾಟಕ ರಾಜ್ಯ ಪತ್ರವನ್ನು ಹೊರಡಿಸಿ ದೈಹಿಕ ಶಿಕ್ಷಣ ಶಿಕ್ಷಕರ ನ್ಯಾಯಯುತ ೧೩ ಅಂಶಗಳ ಬೇಡಿಕೆಗಳ ಪೈಕಿ ೧೨ ಅಂಶಗಳನ್ನು ಜಾರಿ ಗೊಳಿಸಿದ್ದು ೧೩ ನೆಯ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಕರಿಗೆ ನೀಡಲು ಇಲಾಖೆಯಿಂದ ಅನುಷ್ಠಾನದ ಆದೇಶವಾಗಿಲ್ಲ ಈ ಜುಲೈ ಅಂತ್ಯದೊಳಗೆ ಆದೇಶ ಹೊರ ಬರದಿದ್ದರೇ ನಾವೆಲ್ಲ ಈ ವರ್ಷದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಅದು ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಭರ್ತಿ ಮಾಡುವರಿಗೂ ಅತಿಥಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಬೇಕು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿ ಇದ್ದಲ್ಲಿ ದೈಹಿಕ ಶಿಕ್ಷಕರ ಜೇಷ್ಠತೆ ಆಧಾರದ ಮೇಲೆ ಅಧಿಕ ಪ್ರಭಾರದಲ್ಲಿರಸ ಬೇಕು, ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರು ಗ್ರೇಡ್-೨ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೈಹಿಕ ಶಕ್ಷಣ ಸಂಯೋಜಕ, ಸಹಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಯನ್ನು ಸೃಜಿಸಿ ಮುಂಬಡ್ತಿ ನೀಡಬೇಕು, ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಗಳನ್ನು ರದ್ದು ಪಡಿಸಬೇಕು ಎಸ್.ಸಿ./ಎಸ್.ಟಿನಲ್ಲಿ ದೈಹಿಕ ಶಿಕ್ಷಣ ವಿಷಯವನ್ನು ಭಾಗ ಎ ಸೇರ್ಪಡೆ ತಕ್ಷಣವೇ ಮಾಡಬೇಕು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದೈಹಿಕ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ಹೋಗಲು ಮೊದಲಿನಂತೆ ವೇತನ ಸಹಿತ ಅನಮತಿಯನ್ನು ನೀಡಬೇಕು, ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸುವಂತೆ ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳು ಜುಲೈ ಅಂತ್ಯದೊಳಗೆ ಈಡೇರಿಸದಿದ್ದಲ್ಲಿ ಕ್ರೀಡಾಕೂಟಗಳನ್ನು ಬಹಿಷ್ಕರಿಸಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಸ್,ಎಚ್, ಬಿರಕಬ್ಬಿ, ವಾಯ್,ಎನ್.ಪಾಟೀಲ, ಆಯ್.ಬಿ.ಆದಾಪೂರ, ಬಿ.ಎಸ್.ರಾಠೋಡ, ಎಸ್.ಎಚ್.ತೋಟದ, ಸತೀಶ ರಾಠೋಡ, ಸಿ.ವಾಯ್.ಕುರಿ, ಆರ್,ಎಚ್. ರಾಠೋಡ, ಆರ್.ಕೆ, ಲಮಾಣಿ, ಬಿ.ಜಿ.ಹೊಸಮನಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ ಎಂ. ಬಂಡರಗಲ್ಲ ಹುನಗುಂದ.