ಮಹಿಳೆಯ ಭಾವನಾತ್ಮಕ ಸಂಬಂಧ ಸೀಮಂತ ಕಾರ್ಯಕ್ರಮ.
ಇಂಡಿ ಜನೇವರಿ.21

ಶ್ರೀಮಂತ ಕಾರ್ಯಕ್ರಮ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದು ಮಹಿಳೆ ತನ್ನ ಚೊಚ್ಚಲ ಕುಡಿಯನ್ನು ಗರ್ಭದಲ್ಲಿ ಹೊತ್ತು ಮಗುವಿನ ಆಗಮನದ ನೀರಿಕ್ಷೆಯಲ್ಲಿರುವ ಕಾರ್ಯಕ್ರಮ ಎಂದು ಡಾ|| ಪ್ರೀತಿ ಕೋಳೆಕರ ಹೇಳಿದರು.ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ , ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರು ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ. ತಾಲೂಕಾ ಆಸ್ಪತ್ರೆ ಇಂಡಿ ಸಭಾ ಭವನದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ, ಜೊತೆಗೆ ಎಚ್‌ಐವಿ ಸಿಪಿಲಿಸ್, ಹೆಪಾಟೈಟಿಸ್ ಕಾಯಿಲೆಯ ಕುರಿತು ಜಾಗೃತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು. ಚರ್ಮರೋಗ ತಜ್ಞರಾದಂತಹ ಡಾ|| ಸಂತೋಷ ಪವಾರ್, ಡಾ. ಪ್ರಶಾಂತ್ ಧೂಮಗೊಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದಂತಹ ವೈ. ಎಂ ಪೂಜಾರಿ ಪಾಲ್ಗೊಂಡಂತಹ ಗರ್ಭಿಣಿ ತಾಯಂದಿರಿಗೆ ಸರಕಾರ ದಿಂದ ಸಿಗುವ ಸೌಲಭ್ಯಗಳು ಹಾಗೂ ಪೌಷ್ಟಿಕಾಂಶದ ಆಹಾರದ ಕುರಿತಾದಂತಹ ಮಾಹಿತಿ ,ಹಾಗೂ ಹಚ್.ಐ.ವಿ/ ಏಡ್ಸ್ ಮತ್ತು ಹೆಪಟೈಟಿಸ್, ಸಿಪಿಲಿಸ ಕಾಯಿಲೆ ಕುರಿತು ಜಾಗೃತಿಯನ್ನು ವಹಿಸಬೇಕೆಂದು ತಿಳಿಸಿದರು.ದಂತ ವೈದ್ಯಾಧಿಕಾರಿ ಡಾ|| ರವಿ ಬತಗುಣಕಿ , ಡಾ|| ರವಿ ಅಂಬೆವಾಡಿ, ಕೆ. ಜಿ . ಶೀಲವಂತ, ಶಿವಾಜಿ ಮಾನೆ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆಯ ಏ ಆರ್ ಟಿ , ವಿಭಾಗದ ಎಲ್ಲ ಸಿಬ್ಬಂದಿಗಳು. ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇಂಡಿ ದಿಂದ ಸವಿತಾ ಬೈರ್ಶೆಟ್ಟಿ , ಶ್ರೀಮತಿ. ಭುವನೇಶ್ವರಿಯವರು ಹಾಗೂ ಐಸಿಟಿಸಿ ವಿಭಾಗದ ಎಲ್ಲ ಸಿಬ್ಬಂದಿಗಳು ಮತ್ತು ಡಿಎಸ್‌ಆರ್‌ಸಿ ಭಾಗದ ಎಲ್ಲ ಸಿಬ್ಬಂದಿಗಳು ಮತ್ತು ನಗರ ವಿಭಾಗದ ಎಲ್ಲಾ ಆಶಾ ಕಾರ್ಯ ಕರ್ತೆಯರು ಹಾಗೂ ಆಶಾ ಫೆಸಿಲಿಟೇಟರ್ ಅವರು ಪಾಲ್ಗೊಂಡರು. ಸರ್ಕಾರೇತರ ಸಂಘ ಸಂಸ್ಥೆಗಳಾದಂತ ಉಜ್ವಲ ಸಂಸ್ಥೆ .ಸಿ ಎಸ್ ಸಿ. ಸಂಸ್ಥೆ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ