ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಮಾನ್ವಿ ಅ.19

ವಿದ್ಯಾರ್ಥಿಗಳ ಬಾಳು ಬೆಳಗಾಗ ಬೇಕಾದ ರಾಯಚೂರು ಜಿಲ್ಲೆಯ ಮಾನ್ವಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಒಂದು ರೀತಿಯಲ್ಲಿ ಸುಲಿಗೆ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಯಾವುದೆ ಸೌಲಭ್ಯಗಳಿಲ್ಲ, ಕುಡಿಯುವ ನೀರಿನ ಸೌಲಭ್ಯವಂತು ಇಲ್ಲವೇ ಇಲ್ಲ. ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳ ಬಳಿ ಯಾವ ಕಾನೂನು ಅಡಿಯಲ್ಲಿ ಲೇಟಾಗಿ ಫೀ ಕಟ್ಟಿದರೆ ಬಡ್ಡಿ ವಸೂಲಿ ಮಾಡುತ್ತೀದ್ದೀರಾ ಎಂದು ಪ್ರಶ್ನೆ ಮಾಡಿದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳು ಕಿಡಿಕಾರಿದರು.ನಾವು ಹೆಚ್ವಿನ ಜ್ಞಾನ ಕಲಿಯಬೇಕೆಂದರೆ ಇಲ್ಲಿ ಕಲಿಯಲು ಆಗುತ್ತಿಲ್ಲ.

ಹಾಗೆಯೇ ಇಲ್ಲಿ ಮೂಲ ಸೌಲಭ್ಯಗಳಿಲ್ಲದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇದು. ನಮಗೆ ಯಾವ ಯಾವ ಜ್ಞಾನ ಪಡೆಯಬೇಕು ಅದು ಸಿಗುತ್ತಿಲ್ಲ, ನಾಮಕಾವಸ್ತೆ ಶಿಕ್ಷಣ ಪಡೆದು ಪದವಿ ಪಡೆಯ ಬೇಕಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಮಹಿಳಾ ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಯಿಂದ ಬಳಲಿದರು ಮೂರನೆ ಮಹಡಿಯಿಂದ ಬಳಸೋದಕ್ಕೆ ನೀರು ತಂದು ಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳು ಗುಡುಗಿದರು. ಸರಕಾರದ ನಿಯಮದ ಪ್ರಕಾರ ಇರುವುದು ಬೇರೆ ಮಾನ್ವಿ ಕಲ್ಮಠ ಕಾಲೇಜಿನಲ್ಲಿ ಇರುವುದು ಬೇರೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿರುತ್ತವೆ ಎಂದು ನಮ್ಮ ಮಕ್ಕಳನ್ನು ಬಿ.ಎ.ಎಂ.ಎಸ್ ಕೋರ್ಸ್ ಗಾಗಿ ಪ್ರವೇಶ ಮಾಡಿದರೆ ಒಂದು ರೀತಿಯಲ್ಲಿ ಸೌಲಭ್ಯ ಕೊಡದೆ ಹಣ ವಸೂಲಿ ದಂಧೆ ಮಾಡುತ್ತಿದ್ದರಿಂದ ನಮ್ಮ ಆಕ್ರೋಶ ಇದೆ ಎಂದು ಪೋಷಕರು ಧಿಕ್ಕಾರ ಕೂಗಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್. ಭಾಷಾ.ನಕ್ಕುಂದಿ.ಮಾನ್ವಿ