ಗ್ರಾಮೀಣ ಉತ್ಸವ ಒಗ್ಗಟ್ಟು ಸಹಬಾಳ್ವೆ ಮುಖ್ಯ- ಬಂಗಾರೇಮ್ಮೆ.
ನಾಗರಾಳ ಅ.19

ಜಾತ್ರೆ, ಉತ್ಸವಗಳು ಗ್ರಾಮೀಣ ಭಾಗದ ಜನರ ಒಗ್ಗಟ್ಟು, ಸಾಮರಸ್ಯ, ಸಹಬಾಳ್ವೆಗೆ ಮುನ್ನುಡಿಯಾಗಿವೆ ಎಂದು ಹುಣಶ್ಯಾಳ ಗ್ರಾ.ಪಂ ಮಾಜಿ ಅಧ್ಯಕ್ಷೆ ಬಂಗಾರೇಮ್ಮ ಮಾನಪ್ಪ ದೊಡಮನಿ ಹೇಳಿದರು.ತಾಲೂಕಿನ ನಾಗರಾಳ ಡೋಣದಲ್ಲಿ ಸುತ್ತಲಿನ ಗ್ರಾಮಗಳ ನೇತೃತ್ವದ ಜ್ಞಾನ ದೇವರ ಜಾತ್ರಾ ಮಹೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡ, ಧರ್ಮಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ಸಿಕ್ಕರೆ ಅದು ನನ್ನ ಸೌಭಾಗ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ನಾವದಗಿಯ ಷ್ರ. ಬ್ರ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕಲಕೇರಿಯ ಗುರು ಮಡಿವಾಳೇಶ್ವರ ಶ್ರೀಗಳು ಹಾಗೂ ಚಬನೂರಿನ ಡಾ, ರಾಮಲಿಂಗ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು.

ಖ್ಯಾತ ನೇತ್ರ ತಜ್ಞರಾದ ಪ್ರಭುಗೌಡ ಲಿಂಗದಳ್ಳಿ ರವರ ಸಹೋದರರಾದ ಸಂಗನಗೌಡ ಚಬನೂರ, ಕೊಂಡಗೊಳಿ ಗ್ರಾಪಂ ಅಧ್ಯಕ್ಷರಾದ, ಲಾಲಬಿ ಸೋಲಾಪುರ, ಸಮಾಜ ಸೇವಕ ಹಣಮಂತರಾಯಗೌಡ ಪಡಗಾನೂರ, ಕೇರೊಟಗಿ ಗ್ರಾಪಂ ಸದಸ್ಯರಾದ ಕಿರಣ ನಾಯಕ ಹಾಗೂ ಜಾತ್ರಾ ಸಮಿತಿಯ ದೇವೇಂದ್ರ ಬಿರಾದಾರ, ಸಂಗಣ್ಣ ಬೋರಗಿ, ದೊಡ್ಡಯ್ಯ ಹಿರೇಮಠ, ಪೀರಪ್ಪ ನಾವಿ, ಹಣಮಂತ್ರಾಯ ಬಿರಾದಾರ, ಬಲವಂತ ಚೌದ್ರಿ, ಸಿದ್ದಪ್ಪ ತಳವಾರ, ಪರು ಚೌದ್ರಿ, ಹುಸೇನ್ ಮುಜಾವರ್, ಬಸವರಾಜ ಕೆಸರಟ್ಟಿ, ನೀಲಪ್ಪಗೌಡ ಗೋನಾಳ, ಹಾಗೂ ಗ್ರಾಮದ ಗಣ್ಯರು. ಭಕ್ತರು ಹಾಗೂ ಸುತ್ತಲಿನ ಹಳ್ಳಿಯ ಅಪಾರ ಸಂಖ್ಯೆಯ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ