ದ.ವಿ.ಪ ವಲಯ ಘಟ್ಟಕ ದಿಂದ ಪಂಚಾಯಿತಿಗೆ ವಿವಿಧ ಯೋಜನೆಗಳ ಮಾಹಿತಿ ಪೂರೈಸಿಲಿಕ್ಕೆ – ಎರಡು ದಿನದ ಗಡುವು.
ಬೆಕಿನಾಳ ಅ.19

ತಾಳಿಕೋಟಿ ತಾಲೂಕಿನ ಬೆಕಿನಾಳ ಗ್ರಾಮದ ದಲಿತ ವಿದ್ಯಾರ್ಥಿ ಪರಿಷತ್ ಬೆಕಿನಾಳ ವಲಯ ಘಟಕ ದಿಂದ ಎರಡು ದಿನದಲ್ಲಿ ಮಾಹಿತಿ ನೀಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಮಾತನಾಡಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಿದರು.ಈ ಸಂಧರ್ಭದಲ್ಲಿ ದ.ವಿ.ಪ ತಾಲೂಕ ಮುಖಂಡ ಕಾಶಿನಾಥ್ ತಾಳಿಕೋಟಿ ಮಾತಾಡಿದ ಅವರು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ಯುವ ಜನರ, ಕ್ರೀಡಾಪಟುಗಳ, ನಿರುದ್ಯೋಗಿ ಯುವಕರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನ ಗ್ರಾಮ ಪಂಚಾಯತಿ ಮೂಲಕ ಗ್ರಾಮಗಳ ಅಭಿವೃದ್ಧಿ ಯಾಗುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಗೊಳಿಸಿದ್ದಾದರು ಇಲ್ಲಿಯವರೆಗೆ ಯಾವ ಯೋಜನೆಗಳು ವಿದ್ಯಾರ್ಥಿ ಯುವ ಜನರಿಗೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ, ಆದ್ದರಿಂದ ಎಲ್ಲಾ ಯೋಜನೆಗಳು ಎಲ್ಲಿ ಮಾಯವಾದವು ಇಂದು ಸೂಕ್ತ ಮಾಹಿತಿಯನ್ನು 2 ದಿನಗಳ ಒಳಗಾಗಿ ನೀಡದೆ ಇದ್ದಲ್ಲಿ ಬೆಕಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ವಿದ್ಯಾರ್ಥಿ ಯುವ ಜನರು, ಗ್ರಾಮದ ಹಿರಿಯರೊಂದಿಗೆ ಉಗ್ರವಾದ ಹೋರಾಟ ಮಾಡುವುದು ಕಟ್ಟಿಟ್ಟಬುತ್ತಿ ಎಂದರು. ಈ ಸಂಧರ್ಭ ದಲ್ಲಿ ವಲಯ ಮುಖಂಡರು ವಿದ್ಯಾರ್ಥಿ ಯುವ ಜನರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ