ಕಳ್ಳತನದಿಂದ ನೀರು ತೆಗೆದು ಕೊಳ್ಳುತ್ತಿರುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿ.ಎಂ ರವರಿಗೆ ಮನವಿ.
ವಿಜಯನಗರ ನವೆಂಬರ್.3

ಜಿಲ್ಲೆಯ ಹಂಪಿಯಲ್ಲಿ ಕರ್ನಾಟಕ ಸಂಭ್ರಮ 50 ಜ್ಯೋತಿ ಯಾತ್ರೆಗೆ ಚಾಲನೆ ನೀಡಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ನೀಡಿದರು.ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಸಂಬಂಧ ಪಡುವ ಕಾರ್ಖಾನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತುಂಗಭದ್ರಾ ಜಲಾಶಯದಿಂದ ಅಕ್ರಮವಾಗಿ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಮನವಿ ಹಾಗೂ ಈ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಮತ್ತು ಕನಿಷ್ಠ ವೇತನ ನೀಡಬೇಕು . ವಿಜಯನಗರ, ಬಳ್ಳಾರಿ, ಮತ್ತು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಹಲವಾರು ಕಾರ್ಖಾನೆಗಳು ತುಂಗಭದ್ರಾ ಜಲಾಶಯದಿಂದ ನೀರಿನ ತೆಗೆದು ಕೊಳ್ಳುತ್ತಿದ್ದಾರೆ ಆದರೆ ಜಲಾಶಯ ಭರ್ತಿಯಾದ ನಂತರ ಸರ್ಕಾರದ ಆದೇಶ ಮತ್ತು ಸುತ್ತೋಲೆ ಪ್ರಕಾರ ನೀರನ್ನು ಕೊಡಬೇಕೆಂಬ ನಿಯಮವಿದ್ದು, ಆದರೆ ತುಂಗಭದ್ರಾ ಜಲಾಶಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಂದಿನಿಂದಲೂ ಕೂಡ ಬೇಸಿಗೆ ಕಾಲದಲ್ಲಿ ಕಾರ್ಖಾನೆ ಯವರಿಗೆ ನೀರನ್ನು ಕೊಡುತ್ತಿದ್ದಾರೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ಮೂರು ಜಿಲ್ಲೆಗಳಿದ್ದು ಅವುಗಳಲ್ಲಿ 72 ಹೋಬಳಿಗಳನ್ನು ಒಳಗೊಂಡಿದ್ದು, ಜನರು ಮತ್ತು ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಅಪಾರವಿದ್ದು, ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಮತ್ತು ಈ ಭಾಗದ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ 2 ಬೆಳೆ ಬೆಳೆಯುವುದಕ್ಕೆ ನೀರು ಬೇಕಾಗುತ್ತದೆ. ಈ ವರ್ಷ ಸರಿಯಾಗಿ ಮಳೆ ಇಲ್ಲದ ಕಾರಣ ತುಂಗಭದ್ರ ಜಲಾಶಯ ಭರ್ತಿ ಆಗಿರುವುದಿಲ್ಲ ಆದ್ದರಿಂದ ಬೇಸಿಗೆ ಕಾಲದಲ್ಲಿ ಕಾರ್ಖಾನೆಗಳಿಗೆ ನೀರು ಕೊಡುವುದನ್ನು ಕೂಡಲೇ ನಿಲ್ಲಿಸ ಬೇಕೆಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆಂದು . ಹಾಗೂ ಮೂರು ಜಿಲ್ಲೆಯಲ್ಲಿ ಬರುವ ಕಾರ್ಖಾನೆಯವರು ಮೊದಲು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗದ ಆದ್ಯತೆ ಮತ್ತು ಕನಿಷ್ಠ ವೇತನ ಒದಗಿಸಿ ಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ.ಕರ್ನಾಟಕ ರಕ್ಷಣಾ ವೇದಿಕೆ ಸಮರ ಸೇನೆ ರಾಜ್ಯ ಉಪಾಧ್ಯಕ್ಷರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ ಎಸ್ ಬಸವರಾಜ್ ಹಾಗೂ ಸಂಘಟನೆ ಪದಾಧಿಕಾರಿಗಳಾದ ವಿ ಹನುಮಂತ, ವಿಜಯ್ ಕುಮಾರ್, ಪೃಥ್ವಿ, ಹಾಗೂ ರಾಜು ಇತರರು ಇದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ