“ವಿಶ್ವ ರೇಬೀಸ್ ರೋಗ ದಿನಾಚರಣೆ” ಶಾಲಾ ಮಕ್ಕಳಲ್ಲಿ ಜಾಗೃತಿ.
ಮನ್ನಿಕಟ್ಟಿ ಅ.22
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮನ್ನಿಕಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಿಶ್ವ ರೇಬೀಸ್ ರೋಗ ದಿನಾಚರಣೆ” ಆಯೋಜಿಸಲಾಗಿತ್ತು. ಶಾಲ್ಲಾ ಮುಖ್ಯ ಶಿಕ್ಷಕ ಎನ್.ಎಮ್ ಕಮ್ಮಾರ ರೇಬೀಸ್ ರೋಗ ಮಾಹಿತಿ ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ನಾಯಿ ಕಡಿತದಿಂದ ರೇಬೀಸ್ ರೋಗ ಹರಡುತ್ತದೆ.
ಗಾಯವನ್ನು ತಕ್ಷಣ ನೀರು ಸಾಬೂನಿನಿಂದ ಸ್ವಚ್ಛ ಗೊಳಸಬೇಕು ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಮೆರೆಗೆ ರೇಬೀಸ್ ಲಸಿಕೆಯ ಪೂರ್ಣ ಪ್ರಮಾಣ ಪಡೆಯಿರಿ. ಸಾಕು ನಾಯಿಗಳಿಗೆ ತಪ್ಪದೇ ಪಶು ಆಸ್ಪತ್ರೆಯಲ್ಲಿ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ನಾಯಿ ಕಡಿತ ತಪ್ಪಿಸಿಕೊಳ್ಳಿ ಮುಂಜಾಗ್ರತೆ ಪಾಲಿಸಬೇಕು ಎಂದರು.
ಮುಖ್ಯ ಶಿಕ್ಷಕರಾದ ಎನ್.ಎಮ್ ಕಮ್ಮಾರ ಆರೋಗ್ಯ ಇಲಾಖೆಯ ಸಲಹೆ ಸೂಚನೆ ಪಾಲಿಸಿಬೇಕು. ಆರೋಗ್ಯವಂತ ಮಕ್ಕಳು ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು. ವಿ.ಎಮ್ ಯಡಹಳ್ಳಿ ಸ್ವಾಗತಿಸಿದರು. ಗುರುಮಾತೆ ಎಮ್.ಎ ಗಡ್ಡಿ ವಂದನಾರ್ಪಣೆ ಮಾಡಿದರು. “ವಿಶ್ವ ರೇಬೀಸ್ ರೋಗ ದಿನಾಚರಣೆ” ಕಾರ್ಯಕ್ರಮದಲ್ಲಿ, ಆರೋಗ್ಯ ಅಧಿಕಾರಿಗಳು, ಶಾಲಾ ಶಿಕ್ಷಕರಾದ, ಬಿ.ಎಮಾ ಅನಗವಾಡಿ, ಎಮ್.ಡಿ ಭಗವತಿ, ಗುರು ಮಾತೆಯರಾದ, ಎಸ್.ಎ ಪತ್ತಾರ ಬಿಸಿ ಊಟದ ಕಾರ್ಯಕ್ರಮ ಮುಖ್ಯ ಅಡಿಗೆಯವರು, ಸಹಾಯಕರು, ಶಾಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.