ರಾಜ ಬೀದಿಗಳಲ್ಲಿ ವಿಜೃಂಭಿಸಿದ ಬಂಜಾರ ಕಲರವ.

ಶಿರಸಿ ಅ.22

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಿಯ ಸನ್ನಿಧಾನದಲ್ಲಿ ಇಂದು ಬಂಜಾರ ಧರ್ಮ ಗುರು ಪರಮ ಪೂಜ್ಯ ಸರ್ದಾರ ಶ್ರೀ ಸೇವಾಲಾಲ್ ಸ್ವಾಮಿಗಳ ನೇತೃತ್ವ ಹಾಗೂ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಾಮೂಹಿಕ ಸಂಕಲ್ಪ ಪೂಜೆ, ಚಂಡಿಕಾಯಾಗ ಹಾಗೂ ಬಂಜಾರ ಧರ್ಮಸಭೆ ಯಶಸ್ವಿಯಾಗಿ ನೆರವೇರಿತು. ಗದಗ ಜಿಲ್ಲೆಯ ಶಿರಹಟ್ಟಿಯ ಜನಪ್ರಿಯ ಶಾಸಕರಾದ ಡಾ. ಚಂದ್ರು ಲಮಾಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಿರಸಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಣ್ಣ ನಾಯಕ್ ಹಾಗೂ ಶಿರಸಿಯ ಉಪ ವಿಭಾಗಾಧಿಕಾರಿಗಳಾದ ಕು. ಕಾವ್ಯರಾಣಿ ಅವರು ಚಂಡಿಕಾಯಾಗ ಹಾಗೂ ಬಂಜಾರರ ಪವಿತ್ರ ಭೋಗ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮೆರವಣಿಗೆಯಲ್ಲಿ ಭಾಗವಹಿಸಿ ಶ್ರೀ ಸೇವಾಲಾಲ್ ಹಾಗೂ ಮರಿಯಮ್ಮ ದೇವಿಯವರಿಗೆ ಪ್ರಾರ್ಥಿಸಿದರು. ಶಿರಸಿಯ ಮಾರಿಕಾಂಬಾ ದೇವಿ ಬಂಜಾರರ ಕುಲ ದೇವತೆಯಾಗಿದ್ದು ಕ್ಷೇತ್ರದಲ್ಲಿ ಆಗಮಿಸುವ ಸಹಸ್ರಾರು ಬಂಜಾರ ಸಮುದಾಯದ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿ, ಶಿರಸಿ ಭಾಗದಲ್ಲಿ ಜಮೀನು/ನಿವೇಶನ ಒದಗಿಸಿ ಸಮುದಾಯ ಭವನವನ್ನು ನಿರ್ಮಾಣ ಮಾಡುವಂತೆ ಮಾನ್ಯ ಶಾಸಕರಿಗೆ ಆಗ್ರಹಿಸಲಾಯಿತು.

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಶಾಸಕರು ಮಾನ್ಯ ಉಪ ವಿಭಾಗಧಿಕಾರಿ ಅವರೊಂದಿಗೆ ಚರ್ಚಿಸಿ ಬರುವ ದಿನಗಳಲ್ಲಿ ಬಂಜಾರ ಸಮುದಾಯದವರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಗದಗ ಜಿಲ್ಲೆಯ ಶಿರಹಟ್ಟಿಯ ಶಾಸಕರಾದ ಮಾನ್ಯ ಡಾ, ಚಂದ್ರು ಲಮಾಣಿ ಅವರು ಮಾತನಾಡಿ ಬಂಜಾರ ಸಮುದಾಯದವರು ಶಿಕ್ಷಣ ವಂತರಾಗಬೇಕು ಹಾಗೂ ಮೀಸಲಾತಿ ಕುರಿತಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಮೀಸಲಾತಿ ವಿಚಾರದಲ್ಲಿ ಸಮಾಜ ಬಾಂಧವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಭಾರತ್ ಬಂಜಾರ ಸೇವಾಲಾಲ್ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಅಶ್ವಥ್ ನಾಯಕ್, ಶಿರಸಿಯ ಹೆಸರಾಂತ ವೈದ್ಯರಾದ ಡಾಕ್ಟರ್ ಪವಾರ್, ಶಿರಸಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹನುಮಂತ ನಾಯ್ಕ್, ಕೆಪಿಟಿಸಿಎಲ್ ನಿವೃತ್ತ ನೌಕರರಾದ ಡಾ, ರಾಜಾನಾಯ್ಕ್, ದಾವಣಗೆರೆ ಮಹಾ ನಗರ ಪಾಲಿಕೆ ಸದಸ್ಯರಾದ ಮಂಜಾನಾಯ್ಕ್, ತಾಂಡ ರಕ್ಷಣಾ ವೇದಿಕೆಯ ಸಂಸ್ಥಾಪಕರಾದ ಲಿಂಗರಾಜ್ ನಾಯ್ಕ್, ರಾಜ್ಯಾಧ್ಯಕ್ಷರಾದ ಮಂಜಾನಾಯ್ಕ್, ದಾವಣಗೆರೆಯ ಬಂಜಾರ ಮುಖಂಡರಾದ ಚಂದ್ರನಾಯ್ಕ್ ಆಲಿಕಲ್, ರವೀಂದ್ರ ನಾಯಕ್ ಹರಪನಹಳ್ಳಿ, ಸುರೇಶ್ ನಾಯ್ಕ ಜಗಳೂರು, ಕಾರವಾರದ ಮಹಿಳಾ ಮಂಡಳದ ಅಧ್ಯಕ್ಷರಾದ ಸುಶೀಲಾ ದೊಡ್ಡಮನಿ, ನ್ಯಾಮತಿ ತಾಲೂಕು ಬಂಜಾರ ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ನಾಯ್ಕ್, ಶಿರಸಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಪಮ್ಮಾರ್, ಬಂಜಾರ ಮುಖಂಡರಾದ ಮೋತಿಲಾಲ್, ಬಾಲು ಚೌಹಾಣ್, ಮಂಜು ನಾಯ್ಕ್ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂಜಾರ ಸಮುದಾಯದ ಸಹಸ್ರಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಂಜುನಾಥ್.ನವಲಿ. ಕೊಪ್ಪಳ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button