ಸಿಡಿಲಿಗೆ (20) ಇಪ್ಪತ್ತು ಕುರಿಗಳು ಬಲಿ.
ಜುಮ್ಮೋಬನಹಳ್ಳಿ ಅ.22

ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾನ 3:30 ಕ್ಕೆ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಅಲ್ಲದೆ ಭಾರಿ ಪ್ರಮಾಣದ ಸಿಡಿಲು ಬಡಿದ ಪರಿಣಾಮ 20 ಕುರಿಗಳು ಬಲಿಯಾದ ಘಟನೆ ಜರುಗಿದೆ. ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮೇಲೆ ಹೋಗಿದ್ದಾಗ ಗುಡುಗು, ಮಿಂಚು, ಮಿಶ್ರಿತ ಮಳೆಯಾಗಿದ್ದು, ಕುರಿಗಳು ಗಿಡಗಳ ಕೆಳಗಡೆ ನಿಂತಿದರಿಂದ ಭಾರಿ ಪ್ರಮಾಣದ ಸಿಡಿಲು ಬಡಿದ ಪರಿಣಾಮ ಸಣ್ಣ ಓಬಯ್ಯರ ಬಡಕಯ್ಯ, ಜಿ ಬಡಕಯ್ಯ, ಬಿ ಬೋರಯ್ಯ ಇವರ ಮೂವರಿಗೆ ಸೇರಿದ 20 ಕುರಿಗಳಿಗೆ ಸಿಡಿಲಿನ ಹೊಡೆತಕ್ಕೆ ಮೃತ ಪಟ್ಟಿದ್ದಾವೆ, ಅಂದಾಜು 1 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕುರಿಗಾಯಿಗಳಿಗೆ ಸೂಕ್ತ ಪರಿಹಾರವನ್ನು ತಾಲೂಕು ಆಡಳಿತ ಕಲ್ಪಿಸ ಬೇಕೆಂದು ಇಲ್ಲಿನ ಮುಖಂಡರು ರೈತರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದಧಿಕಾರಿಗಳು, ಹೊಸಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ