ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎನ್. ಭರಮಣ್ಣ ಅವರಿಂದ – ತಾಲೂಕ ಘಟಕ ರಚಿಸಿದರು.

ಕೊಟ್ಟೂರು ಅ.28

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣ ಇವರ ನೇತೃತ್ವದಲ್ಲಿ ಕೊಟ್ಟೂರು ತಾಲೂಕು ಘಟಕ ರಚನೆ ಮಾಡಲಾಯಿತು. ಕೊಟ್ಟೂರು ತಾಲೂಕು ಅಧ್ಯಕ್ಷರನ್ನಾಗಿ ಶ್ರೀಧರ ಎಸ್ ಒಡೆಯರ್ ಹ್ಯಾಳ್ಯಾ, ಗೌರವಾಧ್ಯಕ್ಷರಾಗಿ ಕೆಬಿ ಕೊಟ್ರೇಶ್ ಸಂಗಮೇಶ್ವರ, ಉಪಾಧ್ಯಕ್ಷರಾಗಿ ನೀಲಕಂಠನಗೌಡ ಜೋಳದ ಕೂಡ್ಲಿಗಿ, ಕಾರ್ಯದರ್ಶಿ ಮೂಗನಗೌಡ ಪ್ರಧಾನ ಕಾರ್ಯದರ್ಶಿ ಎನ್ ಬಸವರಾಜ್ ಉಪ ಕಾರ್ಯದರ್ಶಿ ಬಿ ಚನ್ನಬಸಪ್ಪ ಖಜಾಂಶಿಯಾಗಿ ಅಂಕಲಿ ರಮೇಶ್ ಉಪ ಖಜಾಂಶಿ ಜೆ ಅಂಜನಪ್ಪ ಸಂಘಟನಾ ಕಾರ್ಯದರ್ಶಿ ಯುವರಾಜ್ ಸಹ ಸಂಘಟನಾ ಕಾರ್ಯದರ್ಶಿ ಡಿ ವೆಂಕಟೇಶ್ ಸದಸ್ಯರನ್ನು ಒಳಗೊಂಡಂತೆ ಆಯ್ಕೆ ಮಾಡಲಾಯಿತು.ಕೊಟ್ಟೂರು ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘ ರಚನೆ ಮಾಡಬೇಕು ಏಕೆಂದರೆ ರೈತರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಮಾತ್ರ ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ. ಅಂದರೆ ಇತ್ತೀಚಿನ ದಿನಗಳಲ್ಲಿ ವಿಂಡೋ ಫ್ಯಾನ್ ಸೋಲಾರ್ ಮುಂತಾದವುಗಳ ಕಂಪನಿಯಿಂದ ರೈತರನ್ನು ಮರಳು ಮಾಡಿ ರೈತರಿಗೆ ಹಣದ ಆಮಿಷ ತೋರಿಸಿ ಭೂಮಿಯನ್ನು ಕಬಳಿಸುತ್ತಿದ್ದಾರೆ ರೈತರ ಭೂಮಿಗಳು ಹಿಂತಿರುಗುವುದು ಮುಂದಿನ ದಿನಗಳಲ್ಲಿ ಕಷ್ಟಕರವಾಗಬಹುದು ಆದಷ್ಟು ರೈತರು ಎಚ್ಚೆತ್ತುಕೊಳ್ಳಬೇಕು ಮತ್ತು ತಾಲೂಕಿನಾದ್ಯಂತ ರಸ್ತೆಗಳು ತುಂಬಾ ಹದಗೆಟ್ಟು ಹೋಗಿವೆ ಇಲ್ಲಿನ ಶಾಸಕರಾದ ದಯಾಳುಗಳು ಸರ್ಕಾರಕ್ಕೆ ಒತ್ತಾಯ ಮಾಡಿ ರೈತರಿಗೆ ಭೂಮಿ ವಿಚಾರದಲ್ಲಿ ಆಗುವ ನಷ್ಟವನ್ನು ತಪ್ಪಿಸ ಬೇಕೆಂದು ಎನ್ ಭರಮಣ್ಣ ರಾಜ್ಯ ಉಪಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button