35, ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುತ್ತೇನೆ – ಡಾ, ಭರತ್ ಅಂಚೆ.
ತರೀಕೆರೆ ಅ.28

ಬಾಲ್ಯದಿಂದಲೂ ವೈದ್ಯ ರಾಗಬೇಕೆಂಬ ಗುರಿ ಹೊಂದಿ ಇದೀಗ ವೈದ್ಯರಾಗಿರುತ್ತೇನೆ ಎಂದು ಡಾ. ಭರತ್ ಅಂಚೆ ಹೇಳಿದರು. ಅವರು ಪಟ್ಟಣದ ಹೋಟೆಲ್ ಅರಮನೆ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು . ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಪೊಟೀಸ್, ಸಪ್ತಗಿರಿ, ಅಪೋಲೋ, ಬಿಜಿಎಸ್, ಸಿರಿ, ಹಾಗೂ ಇನ್ನಿತರೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿ ಕನಕಸ್ಥಾಯಿ ಸ್ವಯಂ ಸೇವಾ ಸಂಘ ಹಾಗೂ ಕಾಗಿನೆಲೆ ಸ್ವಾಮೀಜಿ ಶ್ರೀ ಈಶ್ವರಾನಂದ ಸ್ವಾಮೀಜಿ ಆಶೀರ್ವಾದ ದೊಂದಿಗೆ ಕರ್ನಾಟಕ ಸೇವಾ ಫೌಂಡೇಶನ್ ನಲ್ಲಿ ರಾಜ್ಯಾದ್ಯಂತ 50 ಕ್ಕಿಂತ ಹೆಚ್ಚು ತಪಾಸಣಾ ಮತ್ತು 35 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುತ್ತೇನೆ ಎಂದು ಹೇಳಿದರು. ನಾನು ಹುಟ್ಟಿದ ಊರಿಗೆ ಆದ್ಯತೆ ನೀಡಿ ತರೀಕೆರೆ ತಾಲೂಕಿನಾದ್ಯಂತ ಆರೋಗ್ಯ ತಪಾಸಣಾ ಶಿಬಿರ ನಡೆಸಿರುತ್ತೇನೆ. ಬರಗೇನಹಳ್ಳಿ, ಶಾಂತಿಪುರ, ಎ ಗುರುಪುರ, ಲಕ್ಕವಳ್ಳಿ ಹಾಗೂ ತರೀಕೆರೆ ತಾಲೂಕಿನಾದ್ಯಂತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಸೇವೆ ಮಾಡಿದ್ದು ಇನ್ನು ಮುಂದೆಯೂ ಸಹ ಮಾಡುತ್ತೇನೆ. ಈ ಹಿಂದೆ ಕೇಂದ್ರ ಸಚಿವರಾದ ಸಿ.ಕೆ ಜಾಫರ್ ಷರೀಫ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರಿಕೆಟರ್ ವಿನಯ್ ಕುಮಾರ್, ಪದ್ಮನಾಭ ಮುಂತಾದವರಿಗೆ ಚಿಕಿತ್ಸೆ ಮಾಡಿರುತ್ತೇನೆ ನನ್ನ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಆಯ್ಕೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ತರೀಕೆರೆಯಲ್ಲಿ ಒಂದು ಆಸ್ಪತ್ರೆ ಕಟ್ಟಿಸಬೇಕೆಂಬ ಅಚಲ ಗುರಿ ಹೊಂದಿರುತ್ತೇನೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಡಾ, ಸುರೇಂದ್ರ ಬೆಂಗಳೂರು. ವಸಂತ್ ಕುಮಾರ್ ಬರಗೇನಹಳ್ಳಿ, ಹೇಮರಾಜು, ಮುರುಗೇಶಪ್ಪ, ಮಾಜಿ ಪುರಸಭಾ ಅಧ್ಯಕ್ಷರಾದ ಟಿ ಈರಣ್ಣ ಮುಂತಾದವರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು